ETV Bharat / state

ಬಿಲ್ ವಿಚಾರವಾಗಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ - ಎರಡು ಗುಂಪುಗಳ ನಡುವೆ ಗಲಾಟೆ

ಬಿಲ್ ವಿಚಾರವಾಗಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

Assault on hotel owner
ಹೋಟೆಲ್ ಮಾಲೀಕನ ಮೇಲೆ ಹಲ್ಲೆ: ಸಿಸಿಟಿವಿ ದೃಶ್ಯ
author img

By

Published : Sep 20, 2022, 1:19 PM IST

Updated : Sep 20, 2022, 2:32 PM IST

ಮೈಸೂರು: ನಗರದ ಖಾಸಗಿ ಹೋಟೆಲ್​​ನಲ್ಲಿ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಾಲೀಕನ ಮೇಲೆಯೂ ಪುಂಡರು ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್ ಮಾಲೀಕನ ಮೇಲೆ ಹಲ್ಲೆ:ಸಿಸಿಟಿವಿ ದೃಶ್ಯ

ನಗರದ ಜಗನ್ಮೋಹನ ಅರಮನೆ ಸಮೀಪ ಇರುವ ನ್ಯೂ ಹೋಟೆಲ್ ಮೈಸೂರ್​ನಲ್ಲಿ ಗ್ರಾಹಕರೊಬ್ಬರು ಬಿಲ್ ಕೊಡುವಾಗ ವ್ಯಕ್ತಿಯೋರ್ವ ಅವರ ಜೇಬಿಗೆ ಕೈ ಹಾಕಿದ್ದಾನೆ. ಆಗ ಎರಡು ಪ್ರತ್ಯೇಕ ಗುಂಪುಗಳ ನಡುವೆ ಜಗಳ ಆರಂಭವಾಗಿ ಲಾಂಗು-ಮಚ್ಚುಗಳಿಂದ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಬಂದ ಹೋಟೆಲ್ ಮಾಲೀಕ ರಸ್ಮಲ್ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ರಾಯಚೂರಿನ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ; ವಿದ್ಯಾರ್ಥಿಯ ತಲೆಗೆ 12 ಹೊಲಿಗೆ!

Last Updated : Sep 20, 2022, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.