ETV Bharat / state

93 ವರ್ಷದ ಮಹಿಳಾ ಸಜಾಬಂಧಿ ಕೈದಿಯಿಂದ ಅಹವಾಲು ಸ್ವೀಕರಿಸಿದ ಆರಗ ಜ್ಞಾನೇಂದ್ರ

ಜೈಲಿನ ಒಳಗಡೆ ಮಾದಕ ವಸ್ತುಗಳು, ಮೊಬೈಲ್ ಫೋನ್ ಬಳಕೆ ವಿರುದ್ಧ ತೀವ್ರ ನಿಗಾ ವಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನಿರ್ದೇಶನ ನೀಡಿದರು.

Araga Jnanendra visited Mysore Jail
ಸಜಾ ಬಂಧಿ ಕೈದಿಗಳಿಂದ ಸಚಿವರಿಗೆ ಮನವಿ
author img

By

Published : Oct 1, 2022, 4:09 PM IST

ಮೈಸೂರು: ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ 93 ವರ್ಷದ ಮಹಿಳಾ ಸಜಾ ಬಂಧಿ ಕೈದಿ ಒಬ್ಬರ ಅಹವಾಲು ಸ್ವೀಕರಿಸಿದರು. ಭೇಟಿ ಸಮಯದಲ್ಲಿ ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ ಕಾರಾಗೃಹದ ಎಫ್​ಎಂ ಬಾನುಲಿ ಕೇಂದ್ರವನ್ನು ವೀಕ್ಷಿಸಿದರು. ಬಾನುಲಿ ಪ್ರಸಾರ ಕೇಂದ್ರದ ಮೂಲಕ ಕಾರಾಗೃಹ ಉದ್ದೇಶಿಸಿ ಮಾತನಾಡಿದರು.

ಸರಕಾರದಿಂದ ಬಂಧಿ ಕೈದಿಗಳ ಪುನರ್ವಸತಿ ಹೆಚ್ಚಿಸಿರುವ ಕೂಲಿ ದರ ಹಾಗೂ ಕಾರಾಗೃಹ ಅಭಿವೃದ್ದಿ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಬಗ್ಗೆ ಬಂಧಿಗಳ ಗಮನ ಸೆಳೆದರು. ಕಾರಾಗೃಹ ಸುಧಾರಣೆಯ ಹಾಗೂ ಮನ ಪರಿವರ್ತನೆಯ ತಾಣವೆಂದು ಸ್ವೀಕರಿಸಿ ಹಾಗೂ ಇಲ್ಲಿನ ಹೊರತಾಗಿಯೂ ಬದುಕು ಇದೆ ಎಂಬ ವಾಸ್ತವ ಅರಿತು ಕೊಳ್ಳಿ ಎಂದು ಹೇಳಿದ ಸಚಿವರು ಎಲ್ಲರಿಗೂ ಶುಭ ಹಾರೈಸಿದರು.

ಕಾರಾಗೃಹದಲ್ಲಿರುವ ಕೈ ಮಗ್ಗ ಘಟಕ, ಕೌಶಲ್ಯ ಅಭಿವೃದ್ಧಿ ಕೇಂದ್ರ, ಹೊಲಿಗೆ ತರಬೇತಿ ಘಟಕಕ್ಕೂ ಭೇಟಿ ನೀಡಿದ ಸಚಿವರು, ಸಜಾಬಂಧಿ ಕೈದಿಗಳ ಮಾತುಕತೆ ನಡೆಸಿದರು. ಕಾರಾಗೃಹದ ಒಳಗಿರುವ ಕೈದಿಗಳ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಸಚಿವರನ್ನು ಕೈದಿಗಳು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಬರ ಮಾಡಿಕೊಂಡರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೇಂದ್ರ ಕಾರಾಗೃಹದ ಘಟಕ ವೀಕ್ಷಿಸಿದರು. ಸಜಾ ಬಂಧಿ ಕೈದಿಗಳಿಂದ ಸಚಿವರು ಮನವಿ ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಮಹಿಳಾ ಸಜಾಬಂಧಿಗಳನ್ನು ಸಹ ಸಚಿವರು ಭೇಟಿ ನೀಡಿ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಕಾರಾಗೃಹದ ಅಡುಗೆ ವಿಭಾಗಕ್ಕೆ ಭೇಟಿ ನೀಡಿದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ನಂತರ ಜೈಲು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಜೈಲಿನ ಒಳಗಡೆ ಮಾದಕ ವಸ್ತುಗಳು, ಮೊಬೈಲ್ ಫೋನ್ ಬಳಕೆ ವಿರುದ್ಧ ತೀವ್ರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಶ್ರೀಮತಿ ಕೆ ಸಿ ದಿವ್ಯಶ್ರೀ ಸೇರಿದಂತೆ, ಹಿರಿಯ ಅಧಿಕಾರಿಗಳೂ ಉಪಸ್ತಿತರಿದ್ದರು.

ಇದನ್ನೂ ಓದಿ : ಮುಂದಿನ ವರ್ಷದೊಳಗೆ 117 ಪೊಲೀಸ್ ಠಾಣೆ ನಿರ್ಮಾಣ: ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.