ETV Bharat / state

ಬೆಂಗಳೂರು: ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕೊಡುವುದಾಗಿ ಸಾಫ್ಟ್‌ವೇರ್ ಉದ್ಯೋಗಿಗೆ 40.18 ಲಕ್ಷ ವಂಚನೆ!

ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ವಿದೇಶಕ್ಕೆ ಮಾದಕದ್ರವ್ಯ ಸಾಗಾಟದ ಪ್ರಕರಣದಲ್ಲಿ ಸಿಲುಕಿರುವಂತೆ ನಂಬಿಸಿ, ಪೊಲೀಸರ ಸೋಗಿನಲ್ಲಿ ಸಹಾಯ ಮಾಡುವುದಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. 30 ವರ್ಷ ವಯಸ್ಸಿನ ಯುವತಿಯೊಬ್ಬರು ನೀಡಿರುವ ದೂರಿನನ್ವಯ ಮುಂಬೈ ಏರ್ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ 40.18 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ವಂಚಕರ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 7ರಂದು ಅಪರಿಚಿತ ನಂಬರ್‌ನಿಂದ ದೂರುದಾರ ಯುವತಿಗೆ ಕರೆ ಮಾಡಿದ್ದ ವಂಚಕನೊಬ್ಬ ತನ್ನನ್ನು ಕೋರಿಯರ್ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ "ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್‌ಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಸೇರಿದಂತೆ ಇತರೆ ಮಾದಕ ಪದಾರ್ಥಗಳಿವೆ. ನಿಮ್ಮ ವೈಯಕ್ತಿಕ ದಾಖಲಾತಿಗಳು ಮತ್ತು ಫೋನ್ ನಂಬರ್ ಕೋರಿಯರ್‌ಗೆ ಲಿಂಕ್ ಆಗಿದೆ. ಈ ಕುರಿತು ನಿಮಗೆ ಏನಾದರೂ ಗೊತ್ತಾ?" ಎಂದು ಕೇಳಿದ್ದಾನೆ. ದೂರುದಾರ ಯುವತಿ ತನಗೆ ಗೊತ್ತಿಲ್ಲ ಎಂದಾಗ "ಮುಂಬೈ ಏರ್ ಕಸ್ಟಮ್ಸ್ ಕಂಟ್ರೋಲ್ ರೂಂಗೆ ಕರೆ ಕನೆಕ್ಟ್ ಮಾಡುತ್ತೇನೆ" ಎಂದು ಮತ್ತೋರ್ವ ವಂಚಕನಿಗೆ ಕರೆಯನ್ನು ವರ್ಗಾಯಿಸಿದ್ದನು.

ಏರ್ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ ಮತ್ತೋರ್ವ ವಂಚಕ, ದೂರುದಾರಳಿಗೆ ಟೆಲಿಗ್ರಾಂ ಆ್ಯಪ್ ಡೌನ್​ಲೋಡ್ ಮಾಡಿಸಿ ವಿಡಿಯೋ ಕರೆ ಮಾಡಿದ್ದಾನೆ. ನಂತರ "ನಾವು 6 ತಿಂಗಳ ಹಿಂದೆ ಬಂಧಿಸಿದ್ದ ಓರ್ವ ಕ್ರಿಮಿನಲ್ ವ್ಯಕ್ತಿ ಸಾರ್ವಜನಿಕರ ದಾಖಲೆಗಳನ್ನು ಪಡೆದು ಕೋರಿಯರ್/ಪಾರ್ಸೆಲ್‌ ರವಾನೆಗೆ ಬಳಸುತ್ತಿದ್ದ. ನಿಮಗೂ ಸಹ ಹಾಗೆಯೇ ಆಗಿರಬಹುದು. ನಾವು 3 ರೀತಿಯಲ್ಲಿ ತನಿಖೆ ನಡೆಸಿ ನಿಮಗೆ PCC (ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್) ಕೊಡುತ್ತೇವೆ" ಎಂದು ನಂಬಿಸಿದ್ದ. ನಂತರ ದೂರುದಾರಳ ವೈಯಕ್ತಿಕ ದಾಖಲೆಗಳು, ಕುಟುಂಬ ಸದಸ್ಯರ ವಿವರ, ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡು, "ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸಿ, ಆರ್​ಬಿಐನಿಂದ ಪರಿಶೀಲನೆ ನಡೆಸಿ ವಾಪಸ್ ನಿಮ್ಮ ಖಾತೆಗೆ ಮರು ವರ್ಗಾವಣೆ ಮಾಡಲಿದ್ದೇವೆ" ಎಂದು ತಿಳಿಸಿದ್ದ.

ಆರೋಪಿಗಳ ಮಾತು ನಿಜವೆಂದು ನಂಬಿದ್ದ ದೂರುದಾರ ಯುವತಿ ತನ್ನ ಮೂರು ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 40.18 ಲಕ್ಷ ರೂ. ಹಣವನ್ನು ಅವರು ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು. ತನ್ನ ಖಾತೆಗೆ ಹಣ ಮರು ವರ್ಗಾವಣೆಯಾಗದಿದ್ದಾಗ ತಾನು ವಂಚನೆಗೊಳಗಾಗಿರುವುದು ತಿಳಿದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಪೊಲೀಸರು ತನಿಖೆ ಆರಂಭಿಸಿದ್ದು, ಹಣ ಜಮೆಯಾದ ಖಾತೆಗಳ ವಿವರಗಳನ್ನು ಕಲೆಹಾಕುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಪ್ರಕರಣ: 1.50 ಕೋಟಿ ವಂಚನೆ, ಆರೋಪಿಗಳು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.