ETV Bharat / state

ಮೈಸೂರು ಪಾಲಿಕೆ ಸಿಬ್ಬಂದಿ ಮೇಲೆ ಯುವಕನಿಂದ ಹಲ್ಲೆ ಆರೋಪ: ದೂರು ದಾಖಲು

ಮೈಸೂರು ನಗರದ ಕೆ.ಟಿ. ಸ್ಟ್ರೀಟ್​​ನಲ್ಲಿರುವ ಅಂಗಡಿಗಳ ಪರವಾನಗಿ ಪರಿಶೀಲನೆಗೆ ಪಾಲಿಕೆಯ ಆರೋಗ್ಯ ಸಿಬ್ಬಂದಿ ತೆರಳಿದ್ದು, ಈ ವೇಳೆ ಯುವಕನೋರ್ವ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

author img

By

Published : Sep 26, 2020, 12:52 PM IST

Representative  Image
ಸಾಂದರ್ಭಿಕ ಚಿತ್ರ

ಮೈಸೂರು: ಅಂಗಡಿಯೊಂದರಲ್ಲಿ ಪರವಾನಗಿ ಪರಿಶೀಲನೆ ನಡೆಸುತ್ತಿದ್ದ ನಗರ ಪಾಲಿಕೆಯ ಆರೋಗ್ಯ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆ ನಗರದ ಕೆ.ಟಿ. ಸ್ಟ್ರೀಟ್ ಬಳಿ ನಡೆದಿದೆ.

ನಗರದ ಕೆ.ಟಿ. ಸ್ಟ್ರೀಟ್​​ನಲ್ಲಿರುವ ಅಂಗಡಿಗಳ ಪರವಾನಗಿಯನ್ನು ಪರಿಶೀಲನೆ ನಡೆಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಜಿ.ವಿ.ಯೋಗೇಶ್ ಎಂಬುವವರ ಮೇಲೆ ಅಂಗಡಿಯ ಯುವಕ ಕಾಸಿಫ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇನ್ನು ಆರೋಗ್ಯ ನಿರೀಕ್ಷಕ ಜಿ.ವಿ.ಯೋಗೇಶ್ ಜೊತೆಗಿದ್ದ ಪೌರಕಾರ್ಮಿಕ ಸಲೀಂ ಎಂಬಾತನ ಮೇಲೆಯೂ ಈ ಯುವಕ ಹಲ್ಲೆಗೈದಿದ್ದಾನೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಜಯಂತ್ ದೂರಿದ್ದಾರೆ.

ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.