ETV Bharat / state

ಸರಳ ದಸರಾ: 30 ನಿಮಿಷದಲ್ಲಿ ಮುಕ್ತಾಯವಾಗಲಿದೆ ಜಂಬೂಸವಾರಿ

ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೂ 5 ಕಿಲೋಮೀಟರ್ ದೂರ ಜಂಬೂಸವಾರಿ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ ಕೇವಲ 500 ಮೀಟರ್​ಗೆ ಸೀಮಿತವಾಗಿದೆ.

30 ನಿಮಿಷದಲ್ಲಿ ಜಂಬೂಸವಾರಿ ಮುಕ್ತಾಯ
30 ನಿಮಿಷದಲ್ಲಿ ಜಂಬೂಸವಾರಿ ಮುಕ್ತಾಯ
author img

By

Published : Oct 21, 2020, 2:10 PM IST

Updated : Oct 21, 2020, 5:50 PM IST

ಮೈಸೂರು: ಈ ಬಾರಿ ನಾಡಹಬ್ಬ ದಸರಾ ಸರಳ ಹಾಗೂ ಸಾಂಪ್ರದಾಯಿಕವಾಗಿ ಅರಮನೆಗೆ ಮಾತ್ರ ಸೀಮಿತವಾಗಿದ್ದು, ಕೇವಲ 500 ಮೀಟರ್ ಅರಮನೆಯ ಒಳಗೆ ಒಂದು ಸುತ್ತು ಹಾಕಿ 30 ನಿಮಿಷದಲ್ಲಿ ಜಂಬೂಸವಾರಿ ಮೆರವಣಿಗೆ ಮುಕ್ತಾಯವಾಗುತ್ತದೆ.

ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿದ್ದು, ಕೇವಲ ಅರಮನೆಗೆ ಮಾತ್ರ ಸೀಮಿತವಾಗಿದೆ. ಪ್ರತಿ ವರ್ಷ ಅದ್ಧೂರಿ ದಸರಾದಲ್ಲಿ ಜಂಬೂಸವಾರಿಯ ವೈಭವದ ಮೆರವಣಿಗೆ ಇರುತ್ತಿತ್ತು. ಆದರೆ ಕೊರೊನಾದಿಂದಾಗಿ ಸರಳವಾಗಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೂ 5 ಕಿಲೋಮೀಟರ್ ದೂರ ಜಂಬೂಸವಾರಿ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ ಕೇವಲ 500 ಮೀಟರ್​ಗೆ ಸೀಮಿತವಾಗಿದೆ.

30 ನಿಮಿಷದಲ್ಲಿ ಜಂಬೂಸವಾರಿ ಮುಕ್ತಾಯ

2000-01ನೇ ವರ್ಷದ ನಂತರ ಸುದೀರ್ಘ ಅವಧಿಯ ಬಳಿಕ ಜಂಬೂ ಸವಾರಿ ಬೇಗನೆ ಮುಗಿಯುತ್ತಿರುವುದು ಇದೆ ಮೊದಲು. 2000 ನೇ ಇಸವಿಯಲ್ಲಿ ಕಾಡುಗಳ್ಳ ವೀರಪ್ಪನ್, ಡಾ.ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿದ್ದ ಸಂದರ್ಭದಲ್ಲಿ ಆ ವರ್ಷ ಜಂಬೂ ಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತಗೊಂಡಿತ್ತು. ಈ ವರ್ಷ ಕೊರೊನಾದಿಂದ ಜಂಬೂ ಸವಾರಿ ಅರಮನೆಗಷ್ಟೇ ಸೀಮಿತವಾಗಿದೆ. ಜೊತೆಗೆ ಸರ್ಕಾರ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಸಾಧನೆ ವಿವರಿಸುವ 2 ಸ್ತಬ್ಧ ಚಿತ್ರ, ಪಥ ಸಂಚಲನಕ್ಕೆ 4 ಪೊಲೀಸ್ ತುಕಡಿ, ಅಶ್ವಾರೋಹಿ ದಳದ ತುಕಡಿ ಇರಲಿವೆ. ಮುಖ್ಯವಾಗಿ 300 ಜನರ ವೀಕ್ಷಣೆಗಷ್ಟೇ ಅವಕಾಶ ನೀಡಲಾಗಿದೆ.

ಜಂಬೂಸವಾರಿ ದಿನದ ಕಾರ್ಯಕ್ರಮ:

ಅಕ್ಟೋಬರ್ 26 ರಂದು ಜಂಬೂ ಸವಾರಿ ನಡೆಯಲಿದ್ದು, ಅಂದು ಮಧ್ಯಾಹ್ನ 2:59 ರಿಂದ 3:20 ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ನವರು ಅರಮನೆಯ ಉತ್ತರ ದ್ವಾರ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡುತ್ತಾರೆ. ನಂತರ ಮಧ್ಯಾಹ್ನ 3:40 ರಿಂದ 4:15 ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಬೆನ್ನ ಮೇಲೆ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಇಟ್ಟು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಈ ವೇಳೆ ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆ ನುಡಿಸುತ್ತಾರೆ. ಫಿರಂಗಿದಳ ಸಿಬ್ಬಂದಿ 7 ಫಿರಂಗಿ ಬಳಸಿ 1 ನಿಮಿಷದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಿದ್ದಾರೆ. ಒಟ್ಟಾರೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು 500 ಮೀಟರ್ ಮೆರವಣಿಗೆ ಮಾಡಿ 30 ನಿಮಿಷದಲ್ಲಿ ಜಂಬೂಸವಾರಿ ಅಂತ್ಯ ಮಾಡುತ್ತಾನೆ.

Last Updated : Oct 21, 2020, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.