ಮೈಸೂರು : ಸಾರಿಗೆ ನೌಕರರ 4 ದಿನದ ಮುಷ್ಕರದಿಂದ ಕೆಎಸ್ಆರ್ಟಿಸಿ ಮೈಸೂರು ವಿಭಾಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ಮತ್ತು ನಗರ ವಿಭಾಗದಲ್ಲಿ ಅಂದಾಜು 3.20 ಕೋಟಿ ನಷ್ಟ ಉಂಟಾಗಿದೆ. ಈ ಪೈಕಿ ಗ್ರಾಮಾಂತರ ವಿಭಾಗದಲ್ಲಿ 2.40 ಕೋಟಿ ಮತ್ತು ನಗರ ಸಾರಿಗೆ ವಿಭಾಗದಲ್ಲಿ 80 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಇದನ್ನೂ ಓದಿ : ನೌಕರರ ಮುಷ್ಕರದಿಂದ ತುಮಕೂರು ಕೆಎಸ್ಆರ್ಟಿಸಿ ಘಟಕಕ್ಕೆ ಆದ ನಷ್ಟವೆಷ್ಟು?
ಸರ್ಕಾರ ನೌಕರರ ಸಂಘದ ಮುಖಂಡರ ಜೊತೆ ನಡೆಸಿದ ಸಂದಾನ ಸಫಲವಾದ ಹಿನ್ನೆಲೆ, ನಿನ್ನೆ ಸಂಜೆಯಿಂದ ಸಾರಿಗೆ ಸೇವೆ ಪುನಾರಂಭವಾಗಿದ್ದು, ಇಂದು ಎಂದಿನಂತೆ ಬಸ್ಗಳು ಓಡಾಡ್ತಿವೆ.