ಮಂಡ್ಯ : ಡಿ ಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಮೈಷುಗರ್ ಕಾರ್ಖಾನೆಯಲ್ಲಿ ಯೂತ್ ಕಾಂಗ್ರೆಸ್ ಸ್ವಚ್ಛ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನೀತಿ ಸಂಹಿತೆ ನಡುವೆಯೂ ಕಾರ್ಖಾನೆಯಲ್ಲಿ ಸ್ವಚ್ಛ ಕೆಲಸಕ್ಕೆ ಹೊರಟ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಕೆಲ ಹೊತ್ತು ಹೈಡ್ರಾಮಾ ನಡೆದಿದೆ.
ಫ್ಯಾಕ್ಚರಿ ಗೇಟ್ ಬಳಿಯೇ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ನೀತಿ ಸಂಹಿತೆ ಜಾರಿಯಿರುವುದಾಗಿ ಪೊಲೀಸರು ಕಾರ್ಯಕರ್ತರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಆದರೂ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್ ನೇತೃತ್ವದಲ್ಲಿ ಬ್ಯಾರಿಕೇಡ್ ತಳ್ಳಿ ಕಾರ್ಖಾನೆ ಒಳ ಪ್ರವೇಶಿಸಲು ಕಾರ್ಯಕರ್ತರು ಯತ್ನಿಸಿದ್ದಾರೆ. ಆಗ ಕೆರಳಿದ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: 2 ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸಿ ಸಂಪುಟ ವಿಸ್ತರಣೆ ಅಂತಿಮಗೊಳಿಸುವೆ : ಬೊಮ್ಮಾಯಿ
ನಲಪಾಡ್ ಸೇರಿದಂತೆ ಎಲ್ಲರನ್ನೂ ಬಂಧಿಸಲು ಪೊಲೀಸರು ಪ್ರಯತ್ನಿಸಿದ್ದು, ಕೊನೆಗೆ ಬಲವಂತವಾಗಿಯೇ ಅವರನ್ನು ಪೊಲೀಸ್ ವಾಹನದೊಳಗೆ ಕಳುಹಿಸಿದ್ದಾರೆ. ನಂತರ ನಲಪಾಡ್ ಅವರನ್ನು ಎತ್ತಿಕೊಂಡು ಹೋಗಿ ಪೊಲೀಸ್ ವಾಹನದಲ್ಲಿರಿಸಲಾಯಿತು.