ಮಂಡ್ಯ: ಸಂಕ್ರಾಂತಿ ಸಂದರ್ಭದಲ್ಲಿ ಕಿಚ್ಚು ಹಾಯಿಸುವ ವೇಳೆ ಬೆಂಕಿಗೆ ಬಿದ್ದ ಪರಿಣಾಮ ಯುವಕನೋರ್ವ ಗಾಯಗೊಂಡಿದ್ದಾನೆ. ಮಂಡ್ಯ ನಗರದ ಹೊಸಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಿಚ್ಚಾಯಿಸುವ ವೇಳೆ ಈತ ಬೆಂಕಿಗೆ ಬಿದ್ದಿದ್ದಾನೆ. ನಿಷೇಧದ ನಡುವೆಯೂ ಹೊಸಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ.
ಇದನ್ನೂ ಓದಿ: ಸಂಕ್ರಾಂತಿಗೆ ಕಾಯ್ದಿದ್ದೇ ಬಂತು, ಸಂಪುಟ ಪುನಾರಚನೆ ಆಗಲಿಲ್ಲ.. ಆಕಾಂಕ್ಷಿಗಳು 5 ರಾಜ್ಯ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕು..
ಸ್ಥಳೀಯರು ಬೆಂಕಿಯಲ್ಲಿ ಬಿದ್ದ ತಕ್ಷಣ ಯುವಕನನ್ನು ಮೇಲೆ ಎತ್ತಿ ರಕ್ಷಿಸಿದ್ದಾರೆ. ಬೆಂಕಿಗೆ ಬಿದ್ದಿದ್ದರಿಂದ ಮೈ ಹಾಗೂ ಮುಖದ ಭಾಗಕ್ಕೆ ಸುಟ್ಟಿರುವ ಗಾಯಗಳಾಗಿವೆ. ಮಿಮ್ಸ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.