ETV Bharat / state

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ: ಮಂಡ್ಯದಲ್ಲಿ ಇಬ್ಬರ ಬಂಧನ - ಪತಿ ಕೊಲೆ ಮಾಡಿದ ಪತ್ನಿ

ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಪತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

wife killed her husband
ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ
author img

By

Published : Sep 21, 2022, 12:39 PM IST

Updated : Sep 21, 2022, 1:32 PM IST

ಮಂಡ್ಯ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನು ಉಸಿರುಗಟ್ಟಿಸಿ ಪತ್ನಿಯೇ ಕೊಲೆ ಮಾಡಿರುವ ಪ್ರಕರಣ ಮಳವಳ್ಳಿಯಲ್ಲಿ ನಡೆದಿದೆ. ಶಶಿಕುಮಾರ್ (35) ಕೊಲೆಯಾದ ವ್ಯಕ್ತಿ. ಆತನ ಪತ್ನಿ ನಾಗಮಣಿ (28) ಹಾಗೂ ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25) ಬಂಧಿತ ಆರೋಪಿಗಳು.

ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಕಳೆದ ಸೆ.18 ರಂದು ಶಶಿಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕುರಿತು ಶಶಿಕುಮಾರ್ ತಾಯಿ, ಸೊಸೆಯ ಮೇಲೆ ಅನುಮಾನಗೊಂಡು ಪಟ್ಟಣದ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಇದನ್ನೂ ಓದಿ: ಧಾರವಾಡ: ಮದ್ಯದ ಅಮಲಿನಲ್ಲಿ ಪತ್ನಿ ಹತ್ಯೆ ಮಾಡಿದ ಪತಿ

ಈ ಹಿನ್ನೆಲೆಯಲ್ಲಿ ಸಿಪಿಐ ಎ.ಕೆ. ರಾಜೇಶ್ ನೇತೃತ್ವದ ಪೊಲೀಸರ ತಂಡದ ವಿಚಾರಣೆ ನಡೆಸಿದ್ದು, ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ನಾಗಮಣಿ ಮತ್ತು ಹೇಮಂತ್ ಕನಕಪುರ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ವಿವಾಹೇತರ ಸಂಬಂಧ ಹೊಂದಿದ್ದರು. ಪತ್ನಿಯ ವಿವಾಹೇತರ ಸಂಬಂಧದ ಕುರಿತು ತಿಳಿದ ಶಶಿಕುಮಾರ್, ಕಳೆದ ಎರಡು ತಿಂಗಳ ಹಿಂದೆ ಆಕೆಯನ್ನು ಕೆಲಸದಿಂದ ಬಿಡಿಸಿ ಮಳವಳ್ಳಿ ಮನೆಗೆ ಕರೆತಂದು ಮನೆಯಲ್ಲೇ ಇರುವಂತೆ ಹೇಳಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: ಬಿಹಾರದಲ್ಲಿ ತ್ರಿವಳಿ ಕೊಲೆ: ಅಳಿಯನಿಂದಲೇ ಹತ್ಯೆಯಾಗಿರುವ ಶಂಕೆ

ಇದರಿಂದ ಕೋಪಗೊಂಡ ನಾಗಮಣಿ, ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಭಾನುವಾರ ರಾತ್ರಿ ಹೇಮಂತ್​ನನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ಕೊಟ್ಟು ರೂಮ್​ನಲ್ಲಿ ಆಟವಾಡಿಕೊಳ್ಳುವಂತೆ ಹೇಳಿ, ಶಶಿಕುಮಾರ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಯಾರೋ ದುಷ್ಕರ್ಮಿಗಳು ನನ್ನನ್ನು ಮತ್ತು ಮಗನನ್ನು ಕೈಕಾಲು ಕಟ್ಟಿ ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು.

ಇದನ್ನೂ ಓದಿ: ಗಂಡು ಮಗುವಿಲ್ಲದ ಚಿಂತೆ: ಇದ್ದ ಮೂವರು ಹೆಣ್ಣು ಮಕ್ಕಳನ್ನೂ ಕೊಂದ ಅಮ್ಮ!

Last Updated : Sep 21, 2022, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.