ಮಂಡ್ಯ : ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಯುಜಿಸಿ ನಿಯಮಾವಳಿಯಂತೆ ಏಕಕಾಲಕ್ಕೆ ದ್ವಿಪದವಿ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗಿದೆ ಎಂದು ರಾಜ್ಯ ಮುಕ್ತ ವಿವಿಯ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ತಿಳಿಸಿದರು.
ನಗರದ ಮುಕ್ತ ವಿವಿ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಪ್ರವೇಶಾತಿಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಪದವಿಯನ್ನು ಅಧ್ಯಯನ ವಾಡುತ್ತಲೇ ಮತ್ತೊಂದು ಪದವಿ ಪಡೆಯುವಂತೆ ಯುಜಿಸಿ ಅನುಕೂಲ ವಾಡಿಕೊಟ್ಟಿದೆ ಎಂದು ಹೇಳಿದರು.
ಬಿಎ, ಬಿ.ಕಾಂ, ಬಿಎಸ್ಸಿ ಪದವಿಯನ್ನು ಪ್ರತ್ಯೇಕವಾಗಿ ವ್ಯಾಸಂಗ ವಾಡುತ್ತಿರುವವರು ಅದರ ಜತೆಯಲ್ಲೇ ದ್ವಿಪದವಿಯನ್ನು ಅಧ್ಯಯನ ವಾಡಬಹುದು. ಯಾವುದೇ ಸ್ನಾತಕೋತ್ತರ ಪದವಿ ಪಡೆಯುತ್ತಲೇ ಮತ್ತೊಂದು ಸ್ನಾತಕೋತ್ತರ ಪದವಿಯನ್ನೂ ಒಮ್ಮೆಲೇ ಪಡೆಯಬಹುದು ಎಂದು ವಿವರಿಸಿದರು.
ಇದಲ್ಲದೆ ಮೊದಲ ಬಾರಿಗೆ ಶುಲ್ಕ ಪಾವತಿಗೆ ಇಎಂಐ ಅವಕಾಶವನ್ನೂ ನೀಡಲಾಗಿದೆ. ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳಿಗೆ ಶುಲ್ಕದಲ್ಲಿ ಶೇ.30ರಷ್ಟು ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆದು ಸಂಖ್ಯೆ ಹೆಚ್ಚಳವಾದಲ್ಲಿ ಮುಂದಿನ ದಿನಗಳಲ್ಲಿ ವೃತ್ತಿವಾರುಗಳಿಗೆ ಮತ್ತಷ್ತು ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಆನ್‌ಲೈನ್ ಮುಖಾಂತರ ಇ ಲರ್ನಿಂಗ್ ಮೆಟೀರಿಯಲ್ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಾಗಿದೆ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕೊರೊನಾದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.
ಯೂಟ್ಯೂಬ್‌ನಲ್ಲಿಯೇ ಪಾಠ: ವಿವಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಯೂಟ್ಯೂಬ್‌ನಲ್ಲೂ ಪಾಠ ಪ್ರವಚನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠಗಳನ್ನು ಕೇಳಲಾಗದಿದ್ದಲ್ಲಿ, ಯೂಟ್ಯೂಬ್‌ಗಳಲ್ಲಿ ಅಪ್‌ಲೋಡ್ ವಾಡಿರುತ್ತೇವೆ. ಅದನ್ನು ಯಾವ ಸಮಯದಲ್ಲಾದರೂ ಕೇಳಬಹುದು. ಜ್ಞಾನಪೀಠ ಪುರಸ್ಕೃತರ ಬಗ್ಗೆ ಉಪನ್ಯಾಸ ವಾಲಿಕೆಯನ್ನು ಪ್ರಾರಂಭಿಸಲಾಗುತ್ತಿದ್ದು, ಇದೂ ಸಹ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ ಎಂದರು.
ಕಲಾ, ವಾಣಿಜ್ಯ ವಿಭಾಗಗಳಿಗಷ್ಟೇ ಮಾನ್ಯತೆ ನೀಡದೆ ಇದೀಗ ವಿಜ್ಞಾನ ವಿಭಾಗಕ್ಕೂ ಪ್ರಾಧಾನ್ಯತೆ ನೀಡಲಾಗಿದೆ. ಸುಸಜ್ಜಿತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಸಂಶೋಧನೆಗೂ ಒತ್ತು ನೀಡುವ ಸಲುವಾಗಿ ಇಸ್ರೋ ಮತ್ತು ಡಿಆರ್‌ಡಿಒನಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಯುಜಿಸಿ ವಾನ್ಯತೆ ದೊರೆತಿದ್ದು, ಎಂಎಚ್‌ಆರ್‌ಡಿ ಯೋಜನೆಯಡಿ 3 ಕೋಟಿ ಅನುದಾನ ಬಂದಿದೆ. ನ್ಯಾಕ್ ವಾನ್ಯತೆಗಾಗಿ ಎಲ್ಲ ದಾಖಲಾತಿಗಳನ್ನೂ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.