ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೇವು-ಬೆಲ್ಲ ತಿಂದು ಪ್ರಚಾರ ಆರಂಭ ಮಾಡಿದರು.
ದಲಿತ ಮುಖಂಡ ಗುರು ಪ್ರಸಾದ್ ಕೆರಗೋಡು ಮನೆಗೆ ಭೇಟಿ ನೀಡಿ ಬೆಂಬಲ ಕೋರಿದರು. ಬೆಂಬಲ ಕೋರಿದ ಸುಮಲತಾ ಅಂಬರೀಶ್ಗೆ ಕುಟುಂಬದ ಸದಸ್ಯರು ಬೇವು-ಬೆಲ್ಲ ನೀಡಿ ಸಂಪ್ರದಾಯದಂತೆ ಬೆಂಬಲ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಅಭಿಮಾನಿಗಳಿಗೂ ಸುಮಲತಾ ಬೇವು ಬೆಲ್ಲ ಹಂಚಿದರು. ನಂತರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಡೆ ಪ್ರಚಾರಕ್ಕೆ ತೆರಳಿದರು.
ಸುಮಲತಾಗೆ ಕ್ಷೇತ್ರದ ಹೊಳಲು ಗ್ರಾಮದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದರು. ಜೆಸಿಬಿ ಮೂಲಕ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿದರು. ಗ್ರಾಮದ ಹಲವು ರಸ್ತೆಗಳಲ್ಲಿ ರೋಡ್ ಶೋ ಮಾಡಿ ಬೆಂಬಲ ಕೋರಿದರು. ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಹಬ್ಬದಲ್ಲೂ ಪ್ರಚಾರ ಮಾಡುತ್ತಿರುವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿ ದೊಡ್ಡದಾಗಿದೆ. ಅದಕ್ಕಾಗಿ ನಿರಂತರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಸುಮಲತಾ ಹೆಸರಿನ ಅಭ್ಯರ್ಥಿಗೆ ಅಂಬಿ ಪತ್ನಿಯನ್ನೇ ಹೋಲುವ ಹಾಗೆ ಚುನಾವಣಾ ಆಯೋಗಕ್ಕೆ ಫೋಟೋ ಕೊಟ್ಟಿರುವ ವಿಚಾರವಾಗಿ, ತಮ್ಮ ಅಭ್ಯರ್ಥಿ ಗೆಲ್ಲಿಸೋಕೆ ನಾನಾ ಕುತಂತ್ರ ಮಾಡುತ್ತಿದ್ದಾರೆ. ಇವರ ಕುತಂತ್ರಕ್ಕೆ ಅಂತ್ಯ ಇಲ್ಲ ಎಂದರು.
ನಿಖಿಲ್ ಪರ ರಾಹುಲ್ ಗಾಂಧಿ ಪ್ರಚಾರ ವಿಚಾರವಾಗಿ ಮೈತ್ರಿ ಸರ್ಕಾರ ಇರೋದ್ರಿಂದ ರಾಹುಲ್ ನಿಖಿಲ್ ಪರ ಬರುತ್ತಿದ್ದಾರೆ. ನಾನು ಬಿಜೆಪಿ ನಾಯಕರ ಸಂಪರ್ಕದಲ್ಲಿಲ್ಲಿ. ಅವರು ಪ್ರಚಾರಕ್ಕೆ ಬರುವ ಬಗ್ಗೆ ಏನು ನಿರ್ಧಾರ ತಗೋತಾತೋ ಗೊತ್ತಿಲ್ಲ. ದರ್ಶನ್ ಕೈಗೆ ಪೆಟ್ಟಾಗಿದೆ. 8 ಅಥವಾ 9 ರಿಂದ ಮತ್ತೆ ದರ್ಶನ್, ಯಶ್ ಪ್ರಚಾರಕ್ಕೆ ಬರ್ತಾರೆ ಎಂದರು.