ಮೈಸೂರು/ಮಂಡ್ಯ: Habitual offenders ಅಂದರೆ ಏನು ಗೊತ್ತಾ ಎಂದು ಇನ್ಸ್ಪೆಕ್ಟರ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರಂ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಸುಸ್ತು ಮಾಡಿದ್ದಾರೆ.
Habitual offenders ಅಂದ್ರೆ ಏನು ಅಂತ ಗೊತ್ತಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಇನ್ಸ್ಪೆಕ್ಟರ್ ರವಿಶಂಕರ್ಗೆ ಪ್ರಶ್ನೆ ಮಾಡಿದಾಗ ಅವರು ಡಿಸಿಪಿ ಕಡೆ ನೋಡಿದರು. ಮತ್ತೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅಲ್ಲಿ ಏನ್ ನೋಡ್ತಿರಾ, ಗೊತ್ತಿಲ್ಲ ಅಂದ್ರೆ ಅಧಿಕಾರಿಗಳ ಬಳಿ ಕೇಳಿ ತಿಳ್ಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ಘಟನೆ ನಡೆದ ಸ್ಥಳದಿಂದ ರಸ್ತೆಗೆ, ಎಷ್ಟು ಕಿಲೋಮೀಟರ್ ಇದೆ. ಒಂದೂವರೆ ಕಿಲೋಮೀಟರ್? ಇನ್ನು ಅದೆಲ್ಲ ಅಳತೆ ಮಾಡಿಲ್ವ? ಕೋರ್ಟ್ನಲ್ಲಿ ಕೇಳಿದರೆ ಏನು ಹೇಳ್ತಿಯಯ್ಯ? ಎಂದು ಇನ್ಸ್ಪೆಕ್ಟರ್ ರವಿಶಂಕರ್ಗೆ ಕ್ಲಾಸ್ ತೆಗೆದುಕೊಂಡರು. ನೀವೆಲ್ಲ ಇದನ್ನೆಲ್ಲ ಹೇಳಿಕೊಟ್ಟಿಲ್ವ ಎಂದು ಡಿಸಿಪಿ ಪ್ರದೀಪ್ ಗುಂಟೆ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
Habitual offenders ಅಂದರೆ ಏನು?:
ರೂಢಿಗತ ಅಪರಾಧಿ, ಪುನರಾವರ್ತಿತ ಅಪರಾಧಿ ಅಥವಾ ವೃತ್ತಿಪರ ಅಪರಾಧಿ. ಈ ಹಿಂದೆ ಅಪರಾಧಗಳನ್ನ ಮಾಡಿ ಶಿಕ್ಷೆಗೊಳಗಾದ ವ್ಯಕ್ತಿ ಎಂದರ್ಥ.
ಮಂಡ್ಯದಲ್ಲಿ ಮಾಧ್ಯಮಗಳಿಂದ ದೂರ ಉಳಿದ ಸಿದ್ದರಾಮಯ್ಯ:
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಂದ ದೂರ ಉಳಿದ ಘಟನೆ ಮಂಡ್ಯದಲ್ಲಿ ನಡೆಯಿತು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದರು. ಮಂಡ್ಯಕ್ಕೆ ಆಗಮಿಸಿದ್ದ ವೇಳೆ ನಾನು ಮಾತನಾಡಲ್ಲ ಎಂದು ಮಾಧ್ಯಮದವರ ಬಳಿ ಮಾತನಾಡಲು ನಿರಾಕರಿಸಿದರು.
ಇದನ್ನೂ ಓದಿ: ಮೈಸೂರು ದರೋಡೆ ಕೇಸ್: ಚಿನ್ನದಂಗಡಿ ಮಾಲೀಕ ನೀಡಿದ್ದ ಸುಪಾರಿಗೆ ಮುಂಬೈ ಜೈಲಲ್ಲೇ ರೆಡಿಯಾಗಿತ್ತಂತೆ ಪ್ಲ್ಯಾನ್!