ETV Bharat / state

ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿ: ಶಾಸಕ ರವೀಂದ್ರ ಶ್ರೀಕಂಠಯ್ಯ - ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿ

ಶಿವಮೊಗ್ಗ ಜಿಲ್ಲೆಯ ಹುಣಸೋಡುನಲ್ಲಿ ಜಿಲೆಟಿನ್​​ ಸ್ಫೋಟಗೊಂಡ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ಹೀರೆನಾಗವಲ್ಲಿ ಸಮೀಪದ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟಗೊಂಡಿದೆ. ಈ ಕುರಿತಂತೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದು, ರಾಜ್ಯದ ಹಿತದೃಷ್ಟಿಯಿಂದ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಶಾಸಕ ರವೀಂದ್ರ ಶ್ರೀಕಂಠಯ್ಯ
MLA Ravindra Srikanthaiah
author img

By

Published : Feb 24, 2021, 12:44 PM IST

Updated : Feb 24, 2021, 2:19 PM IST

ಮಂಡ್ಯ: ರಾಜ್ಯದ ಹಿತದೃಷ್ಟಿಯಿಂದ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸಲಹೆ ನೀಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಗಣಿಗಾರಿಕೆ ಮಾಡಿದರೆ ಸ್ಫೋಟಗಳು ಆಗುವುದು ತಪ್ಪುತ್ತದೆ. ಪ್ರತಿದಿನ ಕಂಡೀಷನ್​ಗಳನ್ನು ಹಾಕುವುದು ಸರಿಯಲ್ಲ ಎಂದರು.

ಇದೇ ವೇಳೆ ಒಕ್ಕಲಿಗರ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಜಾತಿ ನೋಡಿಕೊಂಡು ಮೀಸಲಾತಿ ಕೊಡುವುದು ಬೇಡ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಓದಿ: ಹಿಂದಿನ ಮೈತ್ರಿ ಮುರಿಯಲು ಸಿದ್ದರಾಮಯ್ಯ ಕಾರಣ: ಹೆಚ್​ಡಿಕೆ ಮತ್ತೆ ನೇರಾರೋಪ

ಹಿಂದಿನ ಸರ್ಕಾರದಲ್ಲಿ ಜಿಲ್ಲೆಗೆ ಕುಮಾರಸ್ವಾಮಿಯವರು 9 ಸಾವಿರ ಕೋಟಿ ರೂ. ಕೊಟ್ಟಿದ್ದರು. ಆದರೆ ಅದನ್ನು ಬಿಜೆಪಿವರು ವಾಪಸ್ ತೆಗೆದುಕೊಂಡು ಹೋದರು. ಇದರಿಂದ ಕುಮಾರಸ್ವಾಮಿಯವರನ್ನು ಎಂದಿಗೂ ಮಂಡ್ಯ ಜನ ಕೈಬಿಡಲ್ಲ ಎಂದು ಜೆಡಿಎಸ್ ಪಕ್ಷದ ವಿರುದ್ಧ ಮಾತನಾಡಿದವರಿಗೆ ಶಾಸಕ ಶ್ರೀಕಂಠಯ್ಯ ತಿರುಗೇಟು ನೀಡಿದರು.

Last Updated : Feb 24, 2021, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.