ಮಂಡ್ಯ/ವಿಜಯಪುರ/ಮೈಸೂರು: ಕಳೆದ ವಾರ ಮಳೆ ಆರ್ಭಟಿಸಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರ ಕೊಂಚ ಬಿಡುವು ನೀಡಿದೆ. ಜಲಾಶಯಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಸದ್ಯ ಒಳಹರಿವು ಕಡಿಮೆಯಾಗಿದೆ, ಹೊರಹರಿವನ್ನು ಕೂಡ ಕಡಿಮೆ ಮಾಡಲಾಗಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,283.71 ಅಡಿ
- ಒಳ ಹರಿವು: 5,370 ಕ್ಯೂಸೆಕ್
- ಹೊರ ಹರಿವು: 5,000 ಕ್ಯೂಸೆಕ್
ಆಲಮಟ್ಟಿ ಡ್ಯಾಂ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 518.40 ಮೀಟರ್
- ಒಳಹರಿವು: 29,122 ಕ್ಯೂಸೆಕ್
- ಹೊರಹರಿವು: 13,451 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 103.616 ಟಿಎಂಸಿ
ಕೆಆರ್ಎಸ್ ಜಲಾಶಯ
- ಇಂದಿನ ಮಟ್ಟ:124.80 ಅಡಿ
- ಗರಿಷ್ಠ ಮಟ್ಟ: 124.80 ಅಡಿ
- ಒಳಹರಿವು: 13,515 ಕ್ಯೂಸೆಕ್
- ಹೊರಹರಿವು: 13,774 ಕ್ಯೂಸೆಕ್
- ನೀರು ಸಂಗ್ರಹ: 49.452 ಟಿಎಂಸಿ
ಇದನ್ನೂ ಓದಿ: ಹಿರಿಯ 'ಕೈ' ನಾಯಕರ ಅನುಪಸ್ಥಿತಿಯಲ್ಲಿ ಮೌನ ಸತ್ಯಾಗ್ರಹ: ಕಾರ್ಯಕರ್ತರ ಸಂಖ್ಯೆಯೂ ಇಳಿಕೆ