ETV Bharat / state

ಮಂಡ್ಯದಲ್ಲೂ ಗ್ರಾ.ಪಂ. ಸದಸ್ಯತ್ವ ಹರಾಜು - ವಿಡಿಯೋ ವೈರಲ್

ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಚುನಾವಣೆಗೂ ಮೊದಲೇ ಗ್ರಾಮ ಪಂಚಾಯತ್​ ಸದಸ್ಯತ್ವವನ್ನು ಹರಾಜು ಹಾಕಿ ಹಣಕ್ಕಾಗಿ ಅವಿರೋಧ ಆಯ್ಕೆ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಸದಸ್ಯತ್ವದ ಹರಾಜಿನ ವಿಡಿಯೋ ವೈರಲ್​ ಆಗಿದೆ. ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯತ್​ವೊಂದರ ವಾರ್ಡ್​​​ನ ಮೂರು ಸದಸ್ಯ ಸ್ಥಾನಗಳ ಆಯ್ಕೆಗೆ ಹರಾಜು ಕೂಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

People bidding for the Gram Panchayat membership position; video viral !
ಗ್ರಾ.ಪಂ. ಸದಸ್ಯತ್ವ ಹರಾಜು ಹಾಕಿದ ಜನರು.....ವೈರಲ್ ವಿಡಿಯೋ!
author img

By

Published : Dec 9, 2020, 10:47 AM IST

Updated : Dec 9, 2020, 10:54 AM IST

ಮಂಡ್ಯ: ಗ್ರಾಮ ಪಂಚಾಯತ್​ ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕೂ ಮೊದಲೇ ಸದಸ್ಯತ್ವವನ್ನು ಹರಾಜು ಹಾಕಿದ ವಿಡಿಯೋವೊಂದು ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.

ವೈರಲ್ ವಿಡಿಯೋ!

ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯತ್​ವೊಂದರ ವಾರ್ಡ್​​​ನ 3 ಸದಸ್ಯ ಸ್ಥಾನಗಳ ಆಯ್ಕೆಗೆ ಹರಾಜು ಕೂಗಲಾಗಿತ್ತು. ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಈ 3 ಸ್ಥಾನಗಳನ್ನು ಹರಾಜು ಹಾಕಲು ಪ್ರಮುಖರು ನಿರ್ಧರಿಸಿದ್ದರು ಎನ್ನಲಾಗ್ತಿದೆ.

ಈ ಸುದ್ದಿಯನ್ನೂ ಓದಿ: ರಾತ್ರೋರಾತ್ರಿ ಬಿಕರಿಯಾದ ಗ್ರಾಮ ಪಂಚಾಯತ್​ ಸದಸ್ಯತ್ವ: ಪ್ರಜಾಪ್ರಭುತ್ವಕ್ಕೆ ಕಳಂಕ!

ಹೀಗಾಗಿ ಮಂಗಳವಾರ ಸಂಜೆ ಒಂದೆಡೆ ಸೇರಿ ಸದಸ್ಯ ಸ್ಥಾನದ ಆಯ್ಕೆಗೆ ಹರಾಜು ಹಾಕಿದ್ದಾರೆ. ಹಲವು ಜನರು ಪಾಲ್ಗೊಂಡು ಬಿಡ್ ಕೂಗಿದ್ದು, 1 ಲಕ್ಷ ರೂ. ನಿಂದ ಆರಂಭಗೊಂಡ ಬಿಡ್ ಅಂತಿಮವಾಗಿ 8. 40 ಲಕ್ಷ ರೂ.ವರೆಗೆ ತಲುಪಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನವು 8.40 ಲಕ್ಷ ರೂ.ಗೆ, ಸಾಮಾನ್ಯ ವರ್ಗದ ಮಹಿಳೆ ಸ್ಥಾನವು 5 ಲಕ್ಷ ರೂ. ಹಾಗೂ ಹಿಂದುಳಿದ ವರ್ಗ(ಎ) ಸ್ಥಾನವು 4 ಲಕ್ಷ ರೂ.ಗೆ ಬಿಡ್ ನಿಂತಿದೆ. ಮೂರು ಸ್ಥಾನಗಳು ಬರೋಬ್ಬರಿ ಒಟ್ಟು 17.40 ಲಕ್ಷ ರೂ.ಗೆ ಹರಾಜಾಗಿವೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: ವೈರಲ್​​ ವಿಡಿಯೋ : ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು..!

ಆದ್ರೆ, ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಹರಾಜನ್ನು ರದ್ದುಗೊಳಿಸಿ, ಗ್ರಾಮಸ್ಥರು ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Last Updated : Dec 9, 2020, 10:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.