ಮಂಡ್ಯ: ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಾಗಮಂಗಲ ತಾಲೂಕಿನ ಹುಳ್ಳೇನಹಳ್ಳಿಯಲ್ಲಿ ನಡೆದಿದೆ.
ಮಾಳೆ ಗ್ರಾಮದ ಗಿರೀಶ್ ಎಂಬವರ ಪತ್ನಿ ಸಿಂಚನ (28) ಮಕ್ಕಳಾದ ಮಹೇಂದ್ರ (6), ದಿಂಪನ (3) ಆತ್ಮಹತ್ಯೆ ಮಾಡಿಕೊಂಡವರು. ತನ್ನ ತಾಯಿಯ ಮನೆಗೆಂದು ಹೊರಟಿದ್ದ ಸಿಂಚನ, ಹುಳ್ಳೇನಹಳ್ಳಿ ಗ್ರಾಮದ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿದ್ದಾಳೆ ಎಂದು ತಿಳಿದು ಬಂದಿದೆ.
ಓದಿ : ಭೀಕರ ರಸ್ತೆ ಅಪಘಾತ: ಐವರು ದಾರುಣ ಸಾವು
ಘಟನಾ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.