ETV Bharat / state

CM ರಾಜೀನಾಮೆ ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ : ಶಾಸಕ ರವೀಂದ್ರ ಶ್ರೀಕಂಠಯ್ಯ

ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಕೆಲಸ ಮಾಡಲಿ. ಯಾರಿಗೆ ಜನಾದೇಶ ಇದೆ ಅವರು ಮಾಡಲಿ. ಜನರಿಗೆ ಅನುಕೂಲವಾಗಬೇಕಷ್ಟೇ.. ಅನವಶ್ಯಕವಾಗಿ ರಾಜಕೀಯ ಜಂಜಾಟವಿದ್ದರೆ ಜನರ ಪರ ಕೆಲಸ ಮಾಡುವುದು ಯಾವಾಗ?. ಆದಷ್ಟು ಬೇಗ ಇದನ್ನ ಸರಿಪಡಿಸಿಕೊಂಡು ಹೊಸದಾಗಿ ಪಕ್ಷದ ನಾಯಕರನ್ನ ಆಯ್ಕೆ ಮಾಡಿಕೊಳ್ಳಲಿ..

MLA Ravindra Srikanthaiah
ಶಾಸಕ ರವೀಂದ್ರ ಶ್ರೀಕಂಠಯ್ಯ
author img

By

Published : Jul 23, 2021, 4:02 PM IST

ಮಂಡ್ಯ : ನರೇಂದ್ರ ಮೋದಿಯನ್ನ ಭೇಟಿ ಮಾಡಿದಾಗಲೇ ಹೈಕಮಾಂಡ್​​ನಲ್ಲಿ ತೀರ್ಮಾನವಾಗಿದ್ದು, ಯಡಿಯೂರಪ್ಪ ಅವರು ಬಹುತೇಕ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಸಿಎಂ ರಾಜೀನಾಮೆ ವಿಚಾರವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯೆ

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ರಾಜೀನಾಮೆ ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗುತ್ತದೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ಪಕ್ಷದ ವಿಚಾರ. ಕೋವಿಡ್ ಸಂದರ್ಭದಲ್ಲಿ ರಾಜಕೀಯ ಜಂಜಾಟ ಸಾರ್ವಜನಿಕವಾಗಿ ಬೇಸರ ತರುತ್ತದೆ ಎಂದರು.

ಯಾರು ಬೇಕಾದರೂ ಕೆಲಸ ಮಾಡಲಿ : ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಕೆಲಸ ಮಾಡಲಿ. ಯಾರಿಗೆ ಜನಾದೇಶ ಇದೆ ಅವರು ಮಾಡಲಿ. ಜನರಿಗೆ ಅನುಕೂಲವಾಗಬೇಕಷ್ಟೇ.. ಅನವಶ್ಯಕವಾಗಿ ರಾಜಕೀಯ ಜಂಜಾಟವಿದ್ದರೆ ಜನರ ಪರ ಕೆಲಸ ಮಾಡುವುದು ಯಾವಾಗ?. ಆದಷ್ಟು ಬೇಗ ಇದನ್ನ ಸರಿಪಡಿಸಿಕೊಂಡು ಹೊಸದಾಗಿ ಪಕ್ಷದ ನಾಯಕರನ್ನ ಆಯ್ಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಬಿಜೆಪಿಗೆ ಸೇರ್ಪಡೆಯಾದ ಶಾಸಕರಿಗೆ ಅಭದ್ರತೆ : ಜೆಡಿಎಸ್-ಕಾಂಗ್ರೆಸ್​​ನಿಂದ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಶಾಸಕರಿಗೆ ಅಭದ್ರತೆ ವಿಚಾರವಾಗಿ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ರಾಜಕೀಯದಲ್ಲಿ ಜನಾದೇಶಕ್ಕೆ ತಲೆ ಬಾಗಬೇಕಾಗುತ್ತದೆ. ಮೊದಲು ಈ 18 ಜನಕ್ಕೆ ಕೊಟ್ಟಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್​ನಿಂದ ತೀರ್ಪಾಗಿತ್ತು. ಆದ್ರೆ, ಸರ್ಕಾರ ಇದೆ ಅನ್ನೋ ಕಾರಣಕ್ಕೆ ಒತ್ತಾಯ ಪೂರ್ವಕವಾಗಿ ಜನರ ಭಾವನೆಗಳ ಜತೆ ಆಟವಾಡಿ ರಾಜೀನಾಮೆ ನೀಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಅವಧಿಗೂ ಮುನ್ನ ಚುನಾವಣೆ ಬೇಡ : ಅವಧಿಗೂ ಮುನ್ನ ಚುನಾವಣೆಯಾಗಬಾರದು. ನಮ್ಮ ದೇಶದಲ್ಲಿ ಕೋವಿಡ್ ಸನ್ನಿವೇಶ ಇದೆ. ಇಂತಹ ಸಂದರ್ಭದಲ್ಲಿ ಮತ್ತೆ ಚುನಾವಣೆ ಮಾಡಲು ನಿಂತರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೋಸ ಮಾಡಿದಂತಾಗುತ್ತದೆ. ಈ ಸಂದರ್ಭ ಮುಗಿಯಬೇಕು. 5 ವರ್ಷದ ನಂತರ ಚುನಾವಣೆ ಬರುತ್ತದೆ. ಬಳಿಕ ಜನರು ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದಯ್ಯನಕೊಪ್ಪಲು ಅಂಡರ್ ಪಾಸ್‌ಗೆ ಸೂಚನೆ : ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯದ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಅಗಲೀಕರಣದ ಕಾಮಗಾರಿ ವೀಕ್ಷಣೆ ಮಾಡಿದರು. ಗ್ರಾಮಕ್ಕೆ ತೆರಳುವ ಮಾರ್ಗವಾಗಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯಿಸಿದ್ದು, ಗ್ರಾಮಸ್ಥರ ಮನವಿಯಂತೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಇಂಜಿನಿಯರ್​​ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸೂಚನೆ ನೀಡಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.