ETV Bharat / state

ಕಾಯ್ದೆಯಿಂದ ನಿಮಗ್ಯಾರಿಗೂ ತೊಂದರೆ ಆಗಲ್ಲ: ಮುಸ್ಲಿಂ ಮುಖಂಡರಿಗೆ ಆರ್.ಅಶೋಕ್ ಭರವಸೆ - ಪೌರತ್ವ ಕಾಯ್ದೆ ವಿವಾದ

ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರ ಜೊತೆ ಕಂದಾಯ ಸಚಿವ ಆರ್. ಅಶೋಕ್ ಸಭೆ ನಡೆಸಿದ್ದು, ಪೌರತ್ವ ಕಾಯ್ದೆ ಬಗ್ಗೆ ಸಭೆಯಲ್ಲಿ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.

ashok meeting
ಮುಸ್ಲಿಂ ಮುಖಂಡರ ಜೊತೆ ಸಚಿವ ಆರ್.ಅಶೋಕ್ ಸಭೆ
author img

By

Published : Dec 24, 2019, 9:03 AM IST

ಮಂಡ್ಯ: ಸಚಿವ ಆರ್.ಅಶೋಕ್ ಅವರು ಮುಸ್ಲಿಂ ಸಮುದಾಯದವರ ಜೊತೆ ಸಭೆ ನಡೆಸಿ ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರ ಸಭೆ ಮಾಡಿ, ಕಾಯ್ದೆಯಿಂದ ನಿಮಗ್ಯಾರಿಗೂ ತೊಂದರೆ ಆಗಲ್ಲ, ಹೊಸದಾಗಿ ಬರುವವರಿಗೆ ಮಾತ್ರ ಪೌರತ್ವ ಸಿಗಲ್ಲ. ನಾವು ನಿಮ್ಮೊಡನೆ ಇದ್ದೇವೆ. ಹೀಗಾಗಿ ಆತಂಕಪಡುವ ಅವಶ್ಯಕತೆ ಇಲ್ಲ, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.

ಮುಸ್ಲಿಂ ಮುಖಂಡರ ಜೊತೆ ಸಚಿವ ಆರ್.ಅಶೋಕ್ ಸಭೆ

ಕಳೆದ ಶುಕ್ರವಾರವಷ್ಟೇ ಪ್ರಾರ್ಥನೆ ವೇಳೆ ಪ್ರತಿಭಟನೆ ವ್ಯಕ್ತಪಡಿಸಿ ಕಾಯ್ದೆ ವಿರುದ್ಧ ಕೆಲವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಹಿನ್ನೆಲೆ ಇಂದು ಸಚಿವ ಆರ್.ಅಶೋಕ್ ಸಭೆ ಅಲ್ಪಸಂಖ್ಯಾತ ಮುಖಂಡರ ಜೊತೆ ಸಭೆ ಮಾಡಿ ಕಾಯ್ದೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಆರ್‌. ಅಶೋಕ್, ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ಕಾಯ್ದೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ತಿಳಿಸಿತ್ತು ಎಂದರು.

Intro:ಮಂಡ್ಯ: ಮುಸ್ಲಿಂರ ಜೊತೆ ಸಚಿವ ಅಶೋಕ್ ಸಭೆ ನಡೆಸಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆ ಎಲ್ಲಾ ಮುಸ್ಲಿಂ ಮುಖಂಡರ ಸಭೆ ಮಾಡಿ, ಕಾಯ್ದೆಯಿಂದ ನಿಮಗ್ಯಾರಿಗೂ ತೊಂದರೆ ಆಗಲ್ಲ, ಹೊಸದಾಗಿ ಬರುವವರಿಗೆ ಮಾತ್ರ ಪೌರತ್ವ ಸಿಗಲ್ಲ. ನಾವು ನಿಮ್ಮೊಡನೆ ಇದ್ದೇನೆ, ಹೀಗಾಗಿ ನೀವು ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.
ಕಳೆದ ಶುಕ್ರವಾರಷ್ಟೇ ಪ್ರಾರ್ಥನೆ ವೇಳೆ ಪ್ರತಿಭಟನೆ ವ್ಯಕ್ತಪಡಿಸಿ ಕಾಯ್ದೆ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಮನವಿ ಹಿನ್ನಲೆ ಇಂದು ಸಚಿವ ಆರ್. ಅಶೋಕ್ ಸಭೆ ಮಾಡಿ ಮನವರಿಕೆ ಮಾಡಿಕೊಟ್ಟರು.
ಇನ್ನು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡುತ್ತಿದೆ. ಈ ಕಾಯ್ದೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ತಿಳಿಸಿತ್ತು. ಆಗ ಇಲ್ಲದ್ದು ಈಗ ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದರು.

ಬೈಟ್: ಆರ್. ಅಶೋಕ್, ಕಂದಾಯ ಸಚಿವ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.