ETV Bharat / state

ಕಲ್ಯಾಣ ಮಂಟಪದಿಂದ್ಲೇ ನೇರವಾಗಿ ಬಂದು ಬಿ.ಕಾಂ ಪರೀಕ್ಷೆ ಬರೆದ ಮಂಡ್ಯ ಯುವತಿ! - ಮದುವೆ ದಿನವೇ ಪರೀಕ್ಷೆ ಬರೆದ ನವವಧು

ಮದುವೆ ದಿನವೇ ಪದವಿ ಪರೀಕ್ಷೆ ಬರೆದು ಮಂಡ್ಯ ಯುವತಿ ಸುದ್ದಿಯಾಗಿದ್ದಾರೆ. ಶಿಕ್ಷಣ ಮುಖ್ಯ ಎಂದು ಸಂದೇಶ ಸಾರಿದ ನವವಧುವಿಗೆ ಶುಭಾಶಯಗಳ ಸುರಿಮಳೆ.

ಮದುವೆಯಾದ ದಿನವೇ ಪರೀಕ್ಷೆಗೆ ಹಾಜರಾದ ಮಂಡ್ಯ ಯುವತಿ

author img

By

Published : May 12, 2022, 10:45 AM IST

Updated : May 12, 2022, 3:58 PM IST

ಮಂಡ್ಯ: ಶಿಕ್ಷಣ ಅತ್ಯಮೂಲ್ಯ. ಅದರಲ್ಲೂ ಮಹಿಳಾ ಸಬಲೀಕರಣಕ್ಕೆ ಉನ್ನತ ಶಿಕ್ಷಣ ಅತ್ಯವಶ್ಯಕ. ಮಹಿಳೆಯರಂತೂ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮಂಡ್ಯದ ಯುವತಿಯೋರ್ವಳು ಹಸೆಮಣೆ ಏರಿದ ದಿನವೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾಳೆ.

ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್​ಜಿಜಿ ಪದವಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ.ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ ಪರೀಕ್ಷೆ ಬರೆದ ನವವಧು. ತಾಲೂಕಿನ ಲಿಂಗಪುರ ಗ್ರಾಮದ ಐಶ್ವರ್ಯ ಹಾಗೂ ಮೈಸೂರು ತಾಲೂಕಿನ ಲಕ್ಷ್ಮೀಪುರ ಗ್ರಾಮದ ಎಲ್.ಎಸ್.ಯಶ್ವಂತ್ ವಿವಾಹ ಬುಧವಾರ ನಿಗದಿಯಾಗಿತ್ತು. ಆದ್ರೆ ಇದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್ ಪ್ಲೂಯೆನ್ಸಿ ವಿಷಯದ ಪರೀಕ್ಷೆ ಕೂಡ ಇತ್ತು. ಒಂದೇ ದಿನ ಮದುವೆ ಮತ್ತು ಪರೀಕ್ಷೆ ಇದ್ದರಿಂದ, ಯುವತಿ ಮೊದಲು ಮದುವೆಯಾಗಿ ಬಳಿಕ ಅಲ್ಲಿಂದಲೇ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾಳೆ.

ಯುವತಿ ಪರೀಕ್ಷೆ ಬರೆಯಲು ಪೋಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹಕರಿಸಿದೆ. ಇನ್ನು ಮದುವೆ ದಿನವೇ ಪರೀಕ್ಷೆ ಬರೆದು ದಾಂಪತ್ಯ ಜೀವನದ ಜೊತೆ ವಿದ್ಯಾಭ್ಯಾಸ ಕೂಡ ಮುಖ್ಯ ಎಂದು ಸಾರಿದ ಯುವತಿಗೆ ಶುಭಾಶಯಗಳ ಹರಿದುಬರುತ್ತಿವೆ.

Last Updated : May 12, 2022, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.