ETV Bharat / state

ಮಂಡ್ಯಕ್ಕೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು: ಅನಿತಾ ಕುಮಾರಸ್ವಾಮಿ

author img

By

Published : Mar 19, 2019, 8:56 PM IST

ಮದ್ದೂರಿನ‌ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದು, ಇಂದು ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು.

ಮಂಡ್ಯ: ಸಿಎಂ ಕುಮಾರಸ್ವಾಮಿ ಕುಟುಂಬ ಶಾರದಾಂಬೆ ಪೂಜೆ ನಂತರ ಮದ್ದೂರು ತಾಲೂಕಿನ ಹೊಳೆ ಆಂಜನೇಯಸ್ವಾಮಿಯ ಮೊರೆ ಹೋಗಿದ್ದಾರೆ.

ಮದ್ದೂರಿನ‌ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು. ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದಾರೆ.

ಅನಿತಾ ಕುಮಾರಸ್ವಾಮಿ

ಇಂದು ಸಂಜೆ ನಾಮಪತ್ರ ಸಲ್ಲಿಕೆ ದಿನ ನಿಗದಿ:
ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ. ಪ್ರಚಾರ ಶುರು ಮಾಡಿದ್ದೀವಿ, ಇಂದು ಮಳವಳ್ಳಿಯಲ್ಲಿ ನಿಖಿಲ್ ಪ್ರಚಾರ ಮಾಡ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು. ಮಂಡ್ಯ ಜನ ಅವ್ರನ್ನೇ ಇಷ್ಟಪಡ್ತಾರೆ, ನಿಖಿಲ್​ಗೆ ಇಲ್ಲಿನ ಜನರ ಆಶೀರ್ವಾದ ಇದೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದೇ ನಿಖಿಲ್ ಗೆಲುವಿಗೆ ಸಹಕಾರವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರ ಬೆಂಬಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಪಕ್ಷದ್ರೋಹಿಗಳಿಗೆ ಆ ಪಕ್ಷದ ಮುಖಂಡರು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರು ಬಹುತೇಕ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅನಿತಾ ಕುಮಾರಸ್ವಾಮಿ ಇದೇ ವೇಳೆ ಹೇಳಿದರು.

Intro:Body:

1 dwd building 5.txt   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.