ETV Bharat / state

ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ಬೆದರಿಸಿ ಕೆ.ಆರ್.ಪೇಟೆಗೆ ನುಗ್ಗಿದ್ರಾ ಕೊರೊನಾ ಸೋಂಕಿತರು? - ಕೆ.ಆರ್.ಪೇಟೆ ಚೆಕ್​​ಪೋಸ್ಟ್​​ ನಲ್ಲಿ ಕೊರೊನಾ ಸೀಲ್​ ಯುವಕರು

ಅಪರಿಚಿತ ನಾಲ್ವರು ಯುವಕರು ತಮಗೆ ಕೊರೊನಾ ಇದೆ ಎಂದು ಹೇಳಿ ಚೆಕ್​​ಪೋಸ್ಟ್​​ ಬಳಿ ಪೊಲೀಸರಿಗೆ ಭಯ ಹುಟ್ಟಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆ ಬಳಿ ನಡೆದಿದೆ.

kr pete checkpost news
ಚೆಕ್‌ಪೋಸ್ಟ್​​​ನಿಂದ ಪರಾರಿ
author img

By

Published : Apr 9, 2020, 9:58 AM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಭಯ ಮತ್ತಷ್ಟು ಹೆಚ್ಚಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನಾಲ್ವರು ಯುವಕರು ನಮಗೆ ಕೊರೊನಾ ಇದೆ ಎಂದು ಚೆಕ್ ಪೋಸ್ಟ್ ಅಧಿಕಾರಿಗಳಿಗೆ ಭಯ ಹುಟ್ಟಿಸಿ, ಕೆ.ಆರ್.ಪೇಟೆಗೆ ನುಸಿಳಿರುವ ಘಟನೆ ರಾತ್ರಿ ನಡೆದಿದ್ದು, ಅಲ್ಲಿನ ಅಧಿಕಾರಿಗಳೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಚೆಕ್‌ಪೋಸ್ಟ್​​​ನಿಂದ ಪರಾರಿ

ಮೈಸೂರು ರಸ್ತೆ ಮೂಲಕ ಹಸಿರು ಬಣ್ಣದ ಹೊದಿಕೆ ಹೊಂದಿರು‌ವ ಆಟೋದಲ್ಲಿ ಕೆ.ಆರ್.ಪೇಟೆ ತಾಲೂಕಿನ ಹಾದನೂರು ಬಳಿ ಸ್ಥಾಪಿಸಲಾಗಿರೋ ಚೆಕ್ ಪೋಸ್ಟ್ ಬಳಿ ಬಂದಾಗ ಅಧಿಕಾರಿಗಳು ತಡೆದು ತಪಾಸಣೆ ಮಾಡಲು ಮುಂದಾದಾಗ ಸಿಬ್ಬಂದಿಗೆ ಕೈ ಮೇಲಿದ್ದ ಸೀಲ್ ತೋರಿಸಿ ಹೆದರಿಸಿ ನಾಲ್ವರು ಯುವಕರು ಪರಾರಿಯಾಗಿದ್ದಾರೆ.

ನಾವು ಕೊರೊನಾ ಸೊಂಕಿತರು, ನಮ್ಮನ್ನು ತಡೆದರೆ ಮುಟ್ಟಿ ಬಿಡುವುದಾಗಿ ಹೆದರಿಸಿ ಕೆ.ಆರ್.ಪೇಟೆ ಕಡೆ ಆಟೋದಲ್ಲಿ ತೆರಳಿದ್ದಾರೆ. ತಕ್ಷಣವೇ ಪಟ್ಟಣದ ಪೊಲೀಸರಿಗೆ ಸುದ್ದಿ ಮುಟ್ಟಿಸಿರೋ ಚೆಕ್ಪೋಸ್ ಸಿಬ್ಬಂದಿ ಆತಂಕಗೊಂಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಅಪರಿಚಿತರು ಬಂದಿದ್ದ ಆಟೋ ಹುಡುಕಾಟ ಕಾರ್ಯದಲ್ಲಿ ಕೈಗೊಂಡಿದ್ದಾರೆ. ಆಗಂತುಕರ ಎಂಟ್ರಿಯಿಂದ ತಾಲೂಕು ಆಡಳಿತ ಅಲರ್ಟ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.