ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ಮತದಾರರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಸಲುವಾಗಿ ಗಡ್ಡ ಬಿಟ್ಟಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಯಾವುದೇ ಒಂದು ಸಮಾಜವನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿಲ್ಲ. ನಾವು ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಪಕ್ಷವನ್ನು ಜಾತ್ಯಾತೀತ ಪಕ್ಷ ಅಂತರೆ ಎಂದು ಚಲುವರಾಯಸ್ವಾಮಿ ಅವರ ಹೇಳಿಕೆಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ : ಚೆಲುವರಾಯಸ್ವಾಮಿಗೆ ಮಾಡಲು ಕೆಲಸವಿಲ್ಲದೆ ಹೆಚ್ಡಿಕೆ ವಿರುದ್ಧ ಹೇಳಿಕೆ ನೀಡ್ತಿದ್ದಾರೆ: ಶಾಸಕ ಗೌರಿಶಂಕರ್
ಮಾಜಿ ಸಚಿವರು ರಾಜ್ಯ ಮಟ್ಟದಲ್ಲಿರುವುದರಿಂದ ಸ್ವಯಂ ಘೋಷಣೆ ಮಾಡುವ ನಾಯಕರಾಗಿದ್ದಾರೆ. ನಾವು ಯಾವುದೇ ಅನುಕಂಪ ಗಿಟ್ಟಿಸಿಕೊಳ್ಳುವಂತಹ ಕೆಲಸ ಮಾಡುವುದಿಲ್ಲ. ಎಲ್ಲರ ಬಳಿ ಮಾಹಿತಿ ಪಡೆದೇ ಕೆಲಸ ಮಾತನಾಡುತ್ತೇವೆ. ಆದರೆ, ಇವರು ಹಾಗಲ್ಲ. ಅನುಕಂಪ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಗಡ್ಡ ಬಿಟ್ಟುಕೊಂಡು ಓಡಾಡುತ್ತಿದ್ದಾರೆ.
ಯಾವಾಗಲೂ ಶೇವಿಂಗ್ ಮಾಡಿಕೊಂಡು ಓಡಾಡುತ್ತಿದ್ದ ಮಾಜಿ ಸಚಿವರು ಈಗ ಗಡ್ಡ ಬಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು. 'ಅಯ್ಯೋ ವೀಕ್ ಆಗಿದ್ದಾರೆ, ಏನಾದ್ರೂ ಒಂಟ್ಗಿಂಟ್ ಹೋದಾರು' ಅಂತ ಅನುಕಂಪ ಗಿಟ್ಟಿಸುವ ನೆಪ ಇದು ಎಂದು ಅಪಹಾಸ್ಯ ಮಾಡಿದರು.