ETV Bharat / state

ಪಬ್ಲಿಸಿಟಿಗೋಸ್ಕರ ಕಾಂಗ್ರೆಸ್​​ನವರನ್ನ ಜೆಡಿಎಸ್​​ನವರು ಟೀಕಿಸುತ್ತಾರೆ: ಚಲುವರಾಯಸ್ವಾಮಿ

ಜೆಡಿಎಸ್ ಪಕ್ಷ ಪಬ್ಲಿಸಿಟಿಗೋಸ್ಕರ ಕಾಂಗ್ರೆಸ್​​ನವರನ್ನ ರೇಗಿಸುತ್ತಾರೆ. ಜೆಡಿಎಸ್​ನವರು ಕಾಂಗ್ರೆಸ್​​ನವರನ್ನ ಟೀಕಿಸದಿದ್ರೆ ಅವರು ಇದ್ದಿವಿ ಅಂತಾ ಗೊತ್ತಾಗಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅಪಹಾಸ್ಯ ಮಾಡಿದರು.

chaluvarayaswamy
ಜೆಡಿಎಸ್ ಪಬ್ಲಿಸಿಟಿಗೋಸ್ಕರ ಕಾಂಗ್ರೆಸ್​​ನವರನ್ನ ಟೀಕಿಸುತ್ತಾರೆ:ಚಲುವರಾಯಸ್ವಾಮಿ
author img

By

Published : Jan 5, 2021, 1:03 PM IST

ಮಂಡ್ಯ: ಜೆಡಿಎಸ್ ಬಿಜೆಪಿ ಜೊತೆ ವಿಲೀನವಾದರೂ ಬೇಜಾರಿಲ್ಲ, ಮೈತ್ರಿ ಮಾಡಿಕೊಂಡರು ಬೇಜಾರಿಲ್ಲ. ಅದು ಅವರ ತೀರ್ಮಾನ. ಇದರ ಬಗ್ಗೆ ನಾವು ಕಾಮೆಂಟ್ ಮಾಡುವುದು ಅರ್ಥವಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮದ್ದೂರು ತಾಲೂಕಿನ ಗ್ರಾಪಂ ಚುನಾವಣೆಯಲ್ಲಿ ಜಯ ಗಳಿಸಿದ ಸದಸ್ಯರಿಗೆ ಅಭಿನಂದಿಸಿ‌ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಪಬ್ಲಿಸಿಟಿಗೋಸ್ಕರ ಕಾಂಗ್ರೆಸ್​​ನವರನ್ನ ರೇಗಿಸುತ್ತಾರೆ. ಜೆಡಿಎಸ್​ನವರು ಕಾಂಗ್ರೆಸ್​​ನವರನ್ನ ಟೀಕಿಸದಿದ್ದರೆ ಅವರು ಇದ್ದಿವಿ ಅಂತಾ ಗೊತ್ತಾಗಲ್ಲ ಎಂದು ಅಪಹಾಸ್ಯ ಮಾಡಿದರು.

ಮಾಜಿ ಸಚಿವ ಚಲುವರಾಯಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರನ್ನ ರೇಗಿಸ್ತಾರೆ. ಅವರು ಏನಾದರೂ ಮಾತಾನಾಡಿದರೆ ಇವರ ಬಗ್ಗೆ ಸುದ್ದಿ ಹಾಕ್ತಾರೆ. ಪಬ್ಲಿಸಿಟಿಗೋಸ್ಕರ ಈ ರೀತಿ ಮಾತನಾಡುತ್ತಾರೆ ಎಂದರು. ಇವರ ಹೆಸರು ಚಾಲನೆಯಲ್ಲಿರುವುದಕ್ಕೆ ಕಾಂಗ್ರೆಸ್ ನಾಯಕರನ್ನ ಆಗಾಗ ರೇಗಿಸುತ್ತಾರೆ. ಕಾಂಗ್ರೆಸ್​​ನಲ್ಲಿ ಯಾವುದೇ ಒಡಕುಗಳಿಲ್ಲ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ. ನಮ್ಮ ಪಕ್ಷ ಬಲವಾಗಿದೆ ಎಂದು ಶಾಸಕ ಸುರೇಶ್ ಗೌಡರ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅವರು ಎರಡೂ ಬಾರಿ ಶಾಸಕರಾಗಿದ್ದಾರೆ. 50 ಸಾವಿರ ಅಂತರದಿಂದ ಸೋಲಿಸಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ. ನಾನು ಟೀಕೆ ಮಾಡಲು ಹೊಗುವುದಿಲ್ಲ ಎಂದರು.

ಎಲ್ಲವನ್ನೂ ಕ್ಷೇತ್ರದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ತೀರ್ಮಾನ ಮಾಡ್ತಾರೆ. ಮಂಡ್ಯ ಜಿಲ್ಲೆಯ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿದೆ. ಜಿಲ್ಲೆಯ ಗ್ರಾ.ಪಂ.ನಲ್ಲಿ ಹೆಚ್ಚು ಸ್ಥಾನಗಳಿಸುವ ಮೂಲಕ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ ಎಂದು ಜೆಡಿಎಸ್ ಟೀಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.