ಮಂಡ್ಯ: ನಮ್ಮ ಪರವಾಗಿದ್ದ ಎರಡ್ಮೂರು ಪಂಚಾಯಿತಿಗಳಲ್ಲಿ ವ್ಯತ್ಯಾಸ ಆಗಿದೆ. ಆದರೆ ನಾಗಮಂಗಲದ 35 ಪಂಚಾಯತಿಗಳ ಪೈಕಿ 21 ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಓದಿ: ರಾಜ್ಯದಲ್ಲಿಂದು 380 ಮಂದಿಗೆ ಕೊರೊನಾ ದೃಢ: 8 ಸೋಂಕಿತರು ಬಲಿ
ನಾಗಮಂಗಲದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರನ್ನ ಕರೆ ತಂದು ಶಕ್ತಿ ಪ್ರದರ್ಶನ ನಡೆಸಿದ್ದಾರೆ. ನಾಗಮಂಗಲ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪ್ರಾಬಲ್ಯವಿಲ್ಲದ ನಾಗಮಂಗಲ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದು ನಾನು. ನಾನೇ ಕಟ್ಟಿದ ಪಕ್ಷ ಬಿಟ್ಟಾಗ ಮಾಹಿತಿ ಕೊರತೆಯಿಂದಲೋ, ಗೊಂದಲದಿಂದಲೋ ಸೋಲಾಯಿತು. ಆದರೆ ಈಗ ಜನ ಪ್ರೀತಿಯಿಟ್ಟು ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ ವಿಧಾನಸಭೆ ಸೋಲಿನ ಬಗ್ಗೆ ಸಿಆರ್ಎಸ್ ಮಾತನಾಡಿ, ಮುಂದಿನ ಚುನಾವಣೆ ವೇಳೆ ಬಿಜೆಪಿಯಿಂದ ಪ್ರಭಾವಿ ಶಾಸಕರು ಬರುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಮಾಜಿ, ಹಾಲಿ ಶಾಸಕರು ಸಾಕಷ್ಟು ಜನ ಬದಲಾವಣೆ ಆಗುತ್ತಾರೆ ಎಂದರು. ಈ ಬಗ್ಗೆ ಬಹಳಷ್ಟು ಚರ್ಚೆ ಆಗಿದೆ, ಅಧಿಕೃತವಾಗುವವರೆಗೂ ನಾನು ಏನೂ ಹೇಳಲ್ಲ ಎಂದರು.
ಜೆಡಿಎಸ್ ಬಿಟ್ಟು ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈ ಕುರಿತು ಜೆಡಿಎಸ್ ಪಕ್ಷದ ನಾಯಕರೇ ಹೇಳುತ್ತಿದ್ದಾರೆ.
ನಾವು ಯಾರನ್ನೂ ಒತ್ತಾಯ ಮಾಡಿ ಕರೆತರುವ ಪ್ರಯತ್ನ ಮಾಡಲ್ಲ ಎಂದು ತಿಳಿಸಿದರು.