ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಮದ್ದೂರು ವಡೆಗೆ ಫಿದಾ ಆಗಿದ್ದಾರೆ. ಇಂದು ಕೂಡ ಮಳವಳ್ಳಿ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಮದ್ದೂರು ವಡೆ ಸವಿದಿದ್ದಾರೆ.
ಮದ್ದೂರು ತಾಲೂಕಿನ ಶಿವಪುರದ ಬಳಿಯ ಮದ್ದೂರು ಟಿಫಾನೀಸ್ ಸೆಂಟರ್ನಲ್ಲಿ ಮದ್ದೂರು ವಡೆ ಜೊತೆ ಚಹಾ ಹೀರಿದರು. ಮೊನ್ನೆ ಮಂಡ್ಯದ ಕಾರ್ಯಕ್ರಮಕ್ಕೆ ಹೋಗುವಾಗ ಕೂಡ ಇದೇ ಹೋಟೆಲ್ನಲ್ಲಿ ವಡೆ ಸೇವಿಸಿದ್ದರು. ಮದ್ದೂರು ವಡೆಗೆ ಮನಸೋತಿರುವ ಸಿದ್ದರಾಮಯ್ಯ, ವಡೆಯ ಗುಣಗಾನ ಮಾಡಿದರು.