ETV Bharat / state

ಗಣರಾಜ್ಯೋತ್ಸವ ಪ್ರಯುಕ್ತ ಮಂಡ್ಯದಲ್ಲಿ ನಾಳೆಯಿಂದ 8 ದಿನಗಳ ಕಾಲ ಫಲಪುಷ್ಪ ಪ್ರದರ್ಶನ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 8 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

author img

By

Published : Jan 25, 2020, 2:36 PM IST

flower-show-in-mandya
ಜಿಲ್ಲಾಧಿಕಾರಿ ವೆಂಕಟೇಶ್​

ಮಂಡ್ಯ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 8 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಇದಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಾರಿ ಪ್ರದರ್ಶನ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ. ಮಹಾತ್ಮ ಗಾಂಧಿ ತತ್ವ ಸಿದ್ಧಾಂತಗಳ ಕುರಿತು ಅರಿವು ಮೂಡಿಸುವ ಪುಷ್ಪ ಪ್ರದರ್ಶನ, ಕೆಆರ್​ಎಸ್ ಮಾದರಿ, ಮೈಸೂರು ಸಂಸ್ಥಾನದ ದರ್ಬಾರ್, ಶ್ರೀರಂಗನಾಥ ದಿವ್ಯದರ್ಶನ ಸೇರಿದಂತೆ ಹೂವಿನ ಹಲವು ಪ್ರತಿಕೃತಿಗಳು ಗಮನ ಸೆಳೆಯಲಿವೆ. ಜೊತೆಗೆ ಆಹಾರ ಮೇಳವೂ ನಡೆಯಲಿದೆ.

ಜಿಲ್ಲಾಧಿಕಾರಿ ವೆಂಕಟೇಶ್​

ಮಕ್ಕಳು ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಮಂಗಳಯಾನ, ಚಂದ್ರಯಾನದ ಉಪಗ್ರಹದ ಮಾದರಿ ಇರಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ವಯಸ್ಕರಿಗೆ ₹25 ಪ್ರವೇಶ ದರ ನಿಗದಿಪಡಿಸಲಾಗಿದೆ. ಸಾವಯವ ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾವಯವ ಸಂತನನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 8 ದಿನಗಳ ಕಾಲ ನಡೆಯಲಿವೆ.

Intro:ಮಂಡ್ಯ: ಗಣರಾಜ್ಯೋತ್ಸವ ಹಿನ್ನೆಲೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 8 ದಿನಗಳ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಉತ್ತಮ ಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಕೆ.ಆರ್.ಎಸ್ ಮಾದರಿ, ಮೈಸೂರು ಸಂಸ್ಥಾನದ ದರ್ಬಾರ್, ಶ್ರೀ ರಂಗನಾಥ ದಿವ್ಯ ದರ್ಶನ ಸೇರಿದಂತೆ ಹಲವು ಪ್ರತಿಕೃತಿಗಳ ಹೂವಿನ ಅಲಂಕಾರದಿಂದ ಕಂಗೊಳಿಸಲಿವೆ.
ಇನ್ನು ಮಕ್ಕಳಲ್ಲಿ ವಿಜ್ಞಾನದ ತಿಳುವಳಿಕೆ ಮೂಡಿಸಲು ಚಂದ್ರಯಾನದ ರಾಕೇಟ್ ಮಾದರಿಯನ್ನು ಹೂವಿನ ಅಲಂಕಾರದ ಮೂಲಕ ಪ್ರದರ್ಶನ ಮಾಡಲಿದ್ದಾರೆ ಅಧಿಕಾರಿಗಳು. ಇನ್ನು ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ವಯಸ್ಕರಿಗೆ 25 ರೂಪಾಯಿ ಪ್ರವೇಶ ದನವನ್ನು ನಿಗಧಿ ಮಾಡಲಾಗಿದೆ. ಆಹಾರ ಮೇಳವೂ ಈ ಬಾರಿ ಗಮನ ಸೆಳೆಯಲಿದೆ.
ಸಾವಯವ ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾವಯವ ಸಂತಯನ್ನು ಆಯೋಜನೆ ಮಾಡಲಾಗಿದೆ. ಮಕ್ಕಳಿಗೆ ಮನರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 8 ದಿನಗಳ ಕಾಲ ನಡೆಯಲಿದೆ.
ಬೈಟ್; ಡಾ. ವೆಂಕಟೇಶ್, ಜಿಲ್ಲಾಧಿಕಾರಿ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.