ETV Bharat / state

ಮತ್ತೆ ಸದ್ದು ಮಾಡಿದ ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್ ಅಭಿವೃದ್ಧಿ.. ಬಿಎಸ್​​ವೈ ಅಸ್ತು ಅಂತಾರ..!?

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಯೋಜನೆಗೆ ಪ್ಲಾನ್ ಮಾಡಲಾಗಿತ್ತು. ಈ ಯೋಜನೆ ಕಾವೇರಿ ಕೊಳ್ಳದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಸರ್ಕಾರ ಯೋಜನೆಯನ್ನ ಕೈಬಿಟ್ಟಿತ್ತು.

Development of the Disneyland Model KRS
ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್ ಅಭಿವೃದ್ಧಿ
author img

By

Published : Mar 14, 2021, 7:04 AM IST

Updated : Mar 14, 2021, 10:16 AM IST

ಮಂಡ್ಯ: ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್ ಅಭಿವೃದ್ಧಿಗೆ ಪ್ರವಾಸೋದ್ಯಮ ಸಚಿವರು ಆಸಕ್ತಿ ತೋರಿದ್ದಾರೆ. ಆದರೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಡಿಸ್ನಿಲ್ಯಾಂಡ್ ಯೋಜನೆ ವಿವಾದಕ್ಕೀಡಾಗಿತ್ತು. ಈಗ ಕಾವೇರಿ ಕೊಳ್ಳದಲ್ಲಿ ವಿವಾದಿತ ಡಿಸ್ನಿಲ್ಯಾಂಡ್ ವಿಚಾರ ಮತ್ತೆ ಸದ್ದು ಮಾಡುತ್ತಿದೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಯೋಜನೆಗೆ ಪ್ಲಾನ್ ಮಾಡಲಾಗಿತ್ತು. ಈ ಯೋಜನೆ ಕಾವೇರಿ ಕೊಳ್ಳದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಸರ್ಕಾರ ಯೋಜನೆಯನ್ನ ಕೈಬಿಟ್ಟಿತ್ತು. ಇದೀಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲೂ ಕೂಡ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಸದ್ದು ಮಾಡುತ್ತಿದೆ.

ಮತ್ತೆ ಸದ್ದು ಮಾಡಿದ ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್ ಅಭಿವೃದ್ಧಿ.. ಬಿಎಸ್​​ವೈ ಅಸ್ತು ಅಂತಾರ..!?

ಬಿಎಸ್​​ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಖಾತೆ ಸಚಿವರಾಗಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪಣತೊಟ್ಟಿರುವ ಯೋಗೇಶ್ವರ್ ಮತ್ತೆ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಆಸಕ್ತಿ ತೋರಿದ್ದಾರೆ. ಮಂಡ್ಯದ ಕೆ.ಆರ್.ಎಸ್.ನ ಕಾವೇರಿ ಸಭಾಂಗಣದಲ್ಲಿ ಸಚಿವರು, ಅಧಿಕಾರಿಗಳ ಸಭೆ ಮಾಡಿದರು. ಸಭೆಯಲ್ಲಿ ಕಂದಾಯ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆ ಬಳಿಕ ಮಾತನಾಡಿದ ಸಚಿವ ಯೋಗೇಶ್ವರ್, ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಮೂಲಕ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಶೀಘ್ರವೇ ಅವರು ನಿರ್ಧಾರ ಪ್ರಕಟಿಸಲಿದ್ದಾರೆ. ಸಿಎಂ ನಿರ್ಧಾರದ ಬಳಿಕ ಗ್ಲೋಬಲ್ ಟೆಂಡರ್ ಕರೆದು ಅಭಿವೃದ್ಧಿ ಮಾಡುತ್ತೇವೆ ಎಂದರು.

ಓದಿ : ಮಂಡ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ: ಸಚಿವ ಸಿ.ಪಿ.ಯೋಗೇಶ್ವರ್

ಸಚಿವ ಯೋಗೇಶ್ವರ್ ನಿರ್ಧಾರಕ್ಕೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಒಂದೆಡೆ, ಪರಿಸರವಾದಿಗಳು ಮತ್ತು ರೈತರು ಕಳೆದ ಬಾರಿಯಂತೆ ಈ ಬಾರಿಯೂ ತೀವ್ರ ವಿರೋಧಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ನನ್ನ ಕ್ಷೇತ್ರದ ಜನರಿಗೆ ಅನ್ಯಾಯ ಆಗುವಂಥ ಕಾಮಗಾರಿ ನಡೆಯಲು ನಾನು ಬಿಡಲ್ಲ ಎಂದಿದ್ದಾರೆ.

ವಿವಾದಿತ ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಯೋಜನೆ ಮತ್ತೆ ಸುದ್ದಿಯಾಗುತ್ತಿದೆ. ಸದ್ಯ ಚೆಂಡು ಸಿಎಂ ಅಂಗಳದಲ್ಲಿದ್ದು, ವಿವಾದಿತ ಯೋಜನೆಗೆ ಬಿಜೆಪಿ ಸರ್ಕಾರ ಅಸ್ತು ಎನ್ನುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Last Updated : Mar 14, 2021, 10:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.