ETV Bharat / state

ಮಾತು ಕೊಟ್ಟಂತೆ ಆರ್‌ ಶಂಕರ್‌ಗೆ ಮೇಲ್ಮನೆ ಪ್ರವೇಶ ಭಾಗ್ಯ.. ಯೋಗೇಶ್ವರ್‌ಗೆ ಸಿಕ್ಕೋದೇನು?

ಚನ್ನಪಟ್ಟಣದಲ್ಲಿ ಸೋತರೂ ಸಹ ಸಿಪಿವೈ ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ‌ ಭಾಗವಹಿಸಿ ಚುನಾವಣೆ ಕೆಲಸಗಳನ್ನು ಸಕ್ರಿಯವಾಗಿ ಮಾಡಿದ್ದಾರೆ. ಪಕ್ಷ ಅವರ ಕೋರಿಕೆ ಈಡೇರಿಸುವ ಚಿಂತನೆಯಲ್ಲಿದೆ.

author img

By

Published : Jun 12, 2020, 4:10 PM IST

ಡಿಸಿಎಂ ಅಶ್ವಥ್ ನಾರಾಯಣ್
ಡಿಸಿಎಂ ಅಶ್ವಥ್ ನಾರಾಯಣ್

ಮಂಡ್ಯ : ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಆರ್‌ ಶಂಕರ್‌ಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ ಶಂಕರ್ ಉಪ ಚುಣಾವಣೆಗೆ ನಿಂತಿರಲಿಲ್ಲ. ಹಾಗಾಗಿ ಅವರಿಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಉಳಿದ ಮೂರು ಸ್ಥಾನಕ್ಕಾಗಿ ಎಂಟಿಬಿ ನಾಗರಾಜ್, ಹೆಚ್‌ ವಿಶ್ವನಾಥ್ ಹಾಗೂ ಸಿ ಪಿ ಯೋಗೇಶ್ವರ್ ಸೇರಿ ಹಲವರು ಆಕ್ಷಾಂಕ್ಷಿಗಳಿದ್ದಾರೆ. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ‌ ಮಾಡುತ್ತಾರೆ ಎಂದರು.

ಯಾರಿಗೆ ಅವಕಾಶ ಕಲ್ಪಿಸಬೇಕೆಂಬುದರ ಬಗ್ಗೆ ಪಕ್ಷ ನಿರ್ಧರಿಸುತ್ತೆ.. ಡಿಸಿಎಂ ಅಶ್ವತ್ಥ ನಾರಾಯಣ್

ಸಿ ಪಿ ಯೋಗೇಶ್ವರ್ ಮುನಿಸಿಕೊಂಡು ಪಕ್ಷ ಬಿಡುವ ನಿರ್ಧರಿಸಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಖಂಡಿತ ಯೋಗೇಶ್ವರ್ ಅವರು ಮುನಿಸಿಕೊಂಡಿಲ್ಲ. ಅವರು ಚನ್ನಪಟ್ಟಣದಲ್ಲಿ ಚುನಾವಣೆ ಕಳೆದುಕೊಂಡರೂ ಸಹ ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ‌ ಭಾಗವಹಿಸಿ ಚುನಾವಣೆ ಕೆಲಸಗಳನ್ನು ಸಕ್ರಿಯವಾಗಿ ಮಾಡಿದ್ದಾರೆ. ಪಕ್ಷ ಅವರ ಕೋರಿಕೆ ಈಡೇರಿಸುವ ಚಿಂತನೆಯಲ್ಲಿದೆ ಎಂದರು.

ರಾಜ್ಯಸಭೆಯಲ್ಲಿ ದೇವೇಗೌಡರಿಗೆ ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿ, ಅವರಿಗೆ ನಾವು ಬೆಂಬಲಿಸುವ ಪ್ರಮೇಯವೇ ಉದ್ಭವವಾಗಲ್ಲ. ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿಯೂ ಇದ್ದಾರೆ. ಹಾಗಾಗಿ ಅವರಿಗೆ ನಮ್ಮ ಮತದ ಅವಶ್ಯಕತೆಯೂ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.