ETV Bharat / state

ಗಂಡನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದಿದ್ದ ಮಗಳು: ಮಂಡ್ಯದಲ್ಲಿ ವರ್ಷದ ಬಳಿಕ ಕೊಲೆ ಕೇಸ್​ ಬಯಲು - ಕೊಲೆ

ತಾಯಿಯನ್ನು ಕೊಲೆ ಮಾಡಿದ 6 ತಿಂಗಳ ನಂತರ ಪ್ರಕರಣ ದಾಖಲು ಮಾಡಿ ಆರೋಪಿ ಮಗಳು ಮತ್ತು ಆಕೆ ಗಂಡ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ತಾಯಿಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ
ತಾಯಿಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ
author img

By ETV Bharat Karnataka Team

Published : Jan 7, 2024, 7:59 PM IST

ಮಂಡ್ಯ : ಗಂಡನೊಂದಿಗೆ ಸೇರಿಕೊಂಡು ಹೆತ್ತ ತಾಯಿಯನ್ನು ಮಗಳೇ ಹತ್ಯೆಗೈದಿದ್ದ ಪ್ರಕರಣ ಒಂದು ವರ್ಷ ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ಶಾರದಮ್ಮ (50) ಎಂದು ಗುರುತಿಸಲಾಗಿದೆ. ಅನುಷಾ ಮತ್ತು ಆಕೆಯ ಗಂಡ ಮೈಸೂರು ಸಮೀಪದ ಹಾರೋಹಳ್ಳಿ ಗ್ರಾಮದ ದೇವರಾಜು ಬಂಧಿತ ಆರೋಪಿಗಳು.

ಗಂಡನನ್ನು ಕಳೆದುಕೊಂಡು ಹೆಬ್ಬಕವಾಡಿ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದ ಶಾರದಮ್ಮ ತಮ್ಮ ಮಗಳು ಅನುಷಾಳನ್ನು ಮೈಸೂರು ಸಮೀಪದ ಹಾರೋಹಳ್ಳಿ ಗ್ರಾಮದ ದೇವರಾಜು ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಮಗಳನ್ನು ನೋಡಬೇಕೆಂದಾಗಲೆಲ್ಲಾ ಹಾರೋಹಳ್ಳಿಗೆ ಶಾರದಮ್ಮ ಹೋಗುತ್ತಿದ್ದರು. ಸ್ವಲ್ಪ ದಿನ ಅಲ್ಲಿಯೇ ಇದ್ದು ಮತ್ತೆ ಹೆಬ್ಬಕವಾಡಿಗೆ ಬರುತ್ತಿದ್ದರು. ಹೀಗೆ ಮಗಳನ್ನು ನೋಡಲು ಹೋಗಿದ್ದ ಶಾರದಮ್ಮ 2022ರ ನವೆಂಬರ್​ ತಿಂಗಳಿನಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.

ಈ ನಡುವೆ ಆರೋಪಿಗಳಾದ ದಂಪತಿ ತಮ್ಮೂರಿಗೆ ಬಂದಿದ್ದ ಶಾರದಮ್ಮ ಹೆಬ್ಬಕವಾಡಿ ಗ್ರಾಮಕ್ಕೆ ಹೋಗಿದ್ದಾಳೆ ಎಂದು ಹಾರೋಹಳ್ಳಿಯಲ್ಲಿ ಹೇಳುವುದು. ಹೆಬ್ಬಕವಾಡಿಯಲ್ಲಿ ಬಂದರೆ ಆಕೆ ಎಲ್ಲೋ ಹೊರಟು ಹೋಗಿದ್ದಾಳೆ ಎಂದು ಹೇಳುತ್ತ ಕಾಲಹರಣ ಮಾಡುತ್ತಿದ್ದರು. ಬಳಿಕ ಕಳೆದ ವರ್ಷದ ಜೂನ್ 22 ರಂದು ಹಾರೋಹಳ್ಳಿ ವ್ಯಾಪ್ತಿಯಲ್ಲಿರುವ ವರುಣಾ ಪೊಲೀಸ್ ಠಾಣೆಗೆ ಹೋಗಿ 'ನನ್ನ ತಾಯಿ ಊರಿಗೆ ಬಂದವಳು ನಾಪತ್ತೆಯಾಗಿದ್ದಾಳೆ' ಎಂದು ದೂರು ನೀಡಿ ನಾಪತ್ತೆ ಪ್ರಕರಣವನ್ನು ಅನುಷಾ ದಾಖಲಿಸಿದ್ದಳು.

ಇದಕ್ಕೂ ಮೊದಲು ಹಾರೋಹಳ್ಳಿಗೆ ಬಂದಿದ್ದ ಶಾರದಮ್ಮ ಮತ್ತು ಮಗಳಿಗೆ ಕುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಜಗಳದಲ್ಲಿ ಶಾರದಮ್ಮ ಕೆಳಗೆ ಬಿದ್ದು ಮೃತಪಟ್ಟಿದ್ದರು. ಆಕೆಯ ಸಾವಿನಿಂದ ಗಾಬರಿಯಾದ ಆರೋಪಿಗಳು ಶವವನ್ನು ರಾತ್ರೋರಾತ್ರಿ ಮಂಡ್ಯದ ಹೆಬ್ಬಕವಾಡಿಗೆ ಸಾಗಿಸಿ ಸ್ಮಶಾನದಲ್ಲಿ ಮಣ್ಣು ಮಾಡಿ ಯಾರಿಗೂ ತಿಳಿಯದಂತೆ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು.

ಇದಾದ ಆರೇಳು ತಿಂಗಳ ನಂತರ ವರುಣಾ ಠಾಣೆಗೆ ತೆರಳಿ ತನ್ನ ತಾಯಿ ನಾಪತ್ತೆಯಾಗಿದ್ದಾಳೆ ಎಂದು ಅನುಷಾ ಪ್ರಕರಣ ದಾಲಿಸಿದ್ದಳು. ಇತ್ತ ವರುಣಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಹೆಬ್ಬಕವಾಡಿ ಹಾಗೂ ಹಾರೋಹಳ್ಳಿಗೆ ಪೊಲೀಸರು ತೆರಳಿ ವಿಚಾರಣೆ ಮಾಡುತ್ತಿದ್ದಂತೆ ಇಡೀ ಪ್ರಕರಣ ತೆರೆದುಕೊಳ್ಳಲಾರಂಭಿಸಿತ್ತು. ಎರಡೂ ಗ್ರಾಮಗಳಲ್ಲಿ ಶಾರದಮ್ಮರ ನಾಪತ್ತೆ ಕುರಿತು ವಿಚಾರಿಸುತ್ತಿದ್ದ ವೇಳೆ ಪೊಲೀಸರಿಗೆ ಮಗಳು ಅನುಷಾ ಹಾಗೂ ಅಳಿಯ ದೇವರಾಜು ಅವರ ಮೇಲೆ ಅನುಮಾನ ಮೂಡಿತ್ತು. ಇಬ್ಬರನ್ನು ಕರೆದು ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿದ್ದು, ಅದೊಂದು ಆಕಸ್ಮಿಕ ಘಟನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಶಾರದಮ್ಮರ ಶವವನ್ನು ಆಕೆಯ ಮನೆ ಸಮೀಪವೇ ಇರುವ ಸ್ಮಶಾನದಲ್ಲಿ ಹೂಳಲಾಗಿದೆ ಎಂಬುದು ಖಚಿತವಾಗುತ್ತಿದ್ದಂತೆ ಇಡೀ ಪ್ರಕರಣ ಈಗ ಮಂಡ್ಯ ಗ್ರಾಮಾಂತರ ಪೊಲೀಸ್​ ಠಾಣೆಗೆ ವರ್ಗಾವಣೆಯಾಗಿದೆ. ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಅವರ ನೇತೃತ್ವದಲ್ಲಿ ಶವವನ್ನು ಹೊರ ತೆಗೆದು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾತ್ರಿಯಾದ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗತಿಗೊಳಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ತಹಶೀಲ್ದಾರ್ ಹೇಳಿದ್ದೇನು? : ಕಳೆದ ಒಂದು ವರ್ಷದ ಹಿಂದೆ ಆಳಿಯ ಮತ್ತು ಮಗಳು ಸೇರಿಕೊಂಡು ತಾಯಿಯನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನದ ನಂತರ ಹೆಬ್ಬಕವಾಡಿಯಲ್ಲಿ ಮೃತದೇಹವನ್ನು ಹೂತಿಟ್ಟಿರುವ ಸ್ಥಳವನ್ನು ಆರೋಪಿ ತೋರಿಸಿದ್ದಾನೆ. ಆದರೆ ಸ್ಥಳದಲ್ಲಿ ಭೂಮಿ ಅಗೆದಾಗ ಮೃತದೇಹ ಇನ್ನೂ ಸಿಕ್ಕಿಲ್ಲ. ಇಂದು ಕತ್ತಲು ಆದ ಕಾರಣ ನಾಳೆ ಮತ್ತೆ ಮೃತದೇಹವನ್ನು ಹುಡುಕಿ ಪರೀಕ್ಷೆಗಾಗಿ ಲ್ಯಾಬ್​ಗೆ ಕಳುಹಿಸುತ್ತೇವೆ. ರಾತ್ರಿ ಭದ್ರತೆಗಾಗಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ತಿಳಿಸಿದರು.

ಆರು ತಿಂಗಳ ಹಿಂದೆ ಪೊಲೀಸರು ನಮ್ಮ ಮನೆಗೆ ಬಂದು ಶಾರದಮ್ಮ ಬಗ್ಗೆ ವಿಚಾರಿಸಿದ್ದರು. ನಿಮ್ಮ ಮನೆಗೆ ಬಂದರೆ ಅಥವಾ ಎಲ್ಲಾದರೂ ನೋಡಿದರೆ ನಮಗೆ ಕರೆ ಮಾಡಿ ಎಂದು ಹೇಳಿದ್ದರು. ಇದೀಗ ಆಳಿಯ ಮತ್ತು ಮಗಳು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆ ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಮೃತ ಮಹಿಳೆಯ ಸಂಬಂಧಿ ದೇವಮ್ಮ ಹೇಳಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ಸ್ಮಶಾನಕ್ಕೆ ಸಿಸಿಟಿವಿಯಿಂದ ಚಿರಶಾಂತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.