ETV Bharat / state

ಕೊರೊನಾ ವಾರಿಯರ್ಸ್ ಗುಣಮುಖ.. ವೈದ್ಯರನ್ನು ಸನ್ಮಾನಿಸಿದ ಪೊಲೀಸ್ ಇಲಾಖೆ - ಜಿಲ್ಲಾಧಿಕಾರಿ ಡಾ. ವೆಂಕಟೇಶ್

ಎಲ್ಲರಿಗೂ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ದಾದಿಯರಿಗೆ ಪೊಲೀಸ್ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಚಿಕಿತ್ಸೆ ನೀಡಿದ ಎಲ್ಲರಿಗೂ ಶಾಲು ಹೊದಿಸಿ ಸಿಹಿ ಹಂಚಿ ಅಭಿನಂದಿಸಿದರು.

Corona Warriors cured from corona: Police department honors doctors in Mandya
ಕೊರೊನಾ ವಾರಿಯರ್ಸ್ ಗುಣಮುಖ: ವೈದ್ಯರನ್ನು ಸನ್ಮಾನಿಸಿದ ಪೊಲೀಸ್ ಇಲಾಖೆ
author img

By

Published : Jun 5, 2020, 5:13 PM IST

ಮಂಡ್ಯ : ಇಬ್ಬರು ಕೊರೊನಾ ವಾರಿಯರ್ಸ್ ಸೇರಿದಂತೆ 15 ಮಂದಿ ಗುಣಮುಖರಾದ ಹಿನ್ನೆಲೆ ಇಲ್ಲಿನ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಕೊರೊನಾದಿಂದ ಗುಣಮುಖರಾದ ಪೊಲೀಸ್ ಕಾನ್‌ಸ್ಟೆಬಲ್​​ ಹಾಗೂ ಸಿಡಿಪಿಒರನ್ನು ಅಧಿಕಾರಿಗಳು ಸಂಭ್ರಮದಿಂದ ಬೀಳ್ಕೊಟ್ಟರು. ಆಸ್ಪತ್ರೆಯ ಮುಖ್ಯದ್ವಾರದಿಂದ ಎಂಎಸ್ ಕಚೇರಿವರೆಗೂ ಹೂಮಳೆ ಸುರಿಸಿ ಪೊಲೀಸರು ಸ್ವಾಗತಿಸಿದರು.

ಕೊರೊನಾ ವಾರಿಯರ್ಸ್ ಗುಣಮುಖ.. ವೈದ್ಯರನ್ನು ಸನ್ಮಾನಿಸಿದ ಪೊಲೀಸ್ ಇಲಾಖೆ

ಇಬ್ಬರು ಕೊರೊನಾ ವಾರಿಯರ್ಸ್‌ ಜೊತೆಗೆ ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಗುಣಮುಖರಾಗಿದ್ದು, ಎಲ್ಲರೂ ಬಿಡುಗಡೆಯಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ದಾದಿಯರಿಗೆ ಪೊಲೀಸ್ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಚಿಕಿತ್ಸೆ ನೀಡಿದ ಎಲ್ಲರಿಗೂ ಶಾಲು ಹೊದಿಸಿ ಸಿಹಿ ಹಂಚಿ ಅಭಿನಂದಿಸಿದರು. ಮಿಮ್ಸ್ ಆವರಣದಲ್ಲಿ ಪೊಲೀಸ್ ಇಲಾಖೆ ಹಬ್ಬವನ್ನೇ ಆಚರಣೆ ಮಾಡಿತು. ಹೂ ಮಳೆ ಜೊತೆಗೆ ಪೊಲೀಸ್ ಬ್ಯಾಂಡ್ ಬಾರಿಸಿ ಗೌರವ ಸಲ್ಲಿಸಲಾಯಿತು‌.

ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದಾರೆ. ಮಿಮ್ಸ್‌ನಲ್ಲಿ ದೊರಕುತ್ತಿರುವ ಚಿಕಿತ್ಸೆಯೇ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.