ಮಂಡ್ಯ: ಕೋವಿಡ್ ಪಾಸಿಟಿವ್ ಬಂದ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳಲ್ಲ ಎಂದು ಅಳಿಯ ಅಮಾನವೀಯವಾಗಿ ವರ್ತಿಸಿದ ಘಟನೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಅಂದಹಾಗೆ ಅತ್ತೆಯೇನೂ ಅಳಿಯನ ಮನೆಗೆ ಹೋಗಿರಲಿಲ್ಲ. ಬದಲಿಗೆ ಅಳಿಯನೇ ಅತ್ತೆ ಮನೆಯಲ್ಲೇ ವಾಸವಿದ್ದ. ಇದೀಗ ಕೋವಿಡ್ ಸೋಂಕು ತಗುಲಿದ ಅತ್ತೆಯನ್ನು ಮನೆಗೆ ಸೇರಿಸಿಕೊಳ್ಳಲು ಅಳಿಯ ಒಪ್ಪುತ್ತಿಲ್ಲ.
ಅರೆಚಾಕನಹಳ್ಳಿ ನಿವಾಸಿ ಸಿದ್ದಮ್ಮಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದರಿಂದ ಹೋಂ ಐಸೋಲೇಷನ್ನಲ್ಲಿ ಇರುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಆದರೆ, ಸಿದ್ದಮ್ಮನ ಅಳಿಯ ಮುತ್ತೇಗೌಡ ಇದಕ್ಕೆ ಒಪ್ಪಲಿಲ್ಲ. ಎಷ್ಟೇ ಮನವೊಲಿಸಿದರೂ ಆತ ಮಾತ್ರ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳಲು ಒಪ್ಪಲೇ ಇಲ್ಲ. ಕೊನೆಗೆ ಆಸ್ಪತ್ರೆ ಸಿಬ್ಬಂದಿಯೇ ಮದ್ದೂರು ತಾಲೂಕು ಆಸ್ಪತ್ರೆಗೆ ಸಿದ್ದಮ್ಮನನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ಪತಿಯ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿಯೂ ಕೊನೆಯುಸಿರು!