ಮೈಸೂರು: ಆಸ್ತಿ ವಿಚಾರವಾಗಿ ಮಾರಾಮಾರಿ ನಡೆದು ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದಿರುವ ಘಟನೆ ಟಿ.ನರಸೀಪುರ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮ ಇರಿದಿರುವ ಪರಿಣಾಮ ವಿಜಯಕುಮಾರ್(54) ಅವರ ಹೊಟ್ಟೆಯಿಂದ ಕರುಳು ಆಚೆ ಬಂದಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಜಯಕುಮಾರ್ ಎಂಬುವವರಿಗೆ ತಮ್ಮ ಕಾಂತರಾಜ್ ಎನ್ನುವವನು ಚಾಕುವಿನಿಂದ ಇರಿದ ಪರಿಣಾಮ ಹೊಟ್ಟೆಯ ಭಾಗದಿಂದ ಕರುಳು ಆಚೆ ಬಂದಿದೆ. ನಂತರ ಗಾಬರಿಯಾದ ಕಾಂತರಾಜ್ ಸ್ಥಳದಿಂದ ಪರಾರಿಯಾಗಿದ್ದ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಂತರಾಜ್ನನ್ನು ಅರೆಸ್ಟ್ ಮಾಡಿದ್ದಾರೆ.
ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.