2019 ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ನಿನ್ನೆಯಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಎಲ್ಲಾ ಊರುಗಳಿಗೆ ತೆರಳಿ ದರ್ಶನ್ ಪ್ರಚಾರ ಕೈಗೊಂಡಿದ್ದರು.
ಇಂದು ಕೂಡಾ ಬೇರೆ ಬೇರೆ ಊರುಗಳಿಗೆ ತೆರಳಿ ದರ್ಶನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯದ ಬಿ.ಡಿ. ಕಾಲೋನಿಯಲ್ಲಿ ಕೂಡಾ ದರ್ಶನ್ಗೆ ಅದ್ದೂರಿ ಸ್ವಾಗರ ಸಿಕ್ಕಿದೆ. ಆ ಕಾಲೋನಿಯಲ್ಲಿ ಬಹುತೇಕ ಮುಸ್ಲಿಮ ಧರ್ಮಿಯರು ಹೆಚ್ಚಿದ್ದಾರೆ. ಅಲ್ಲಿಗೆ ಪ್ರಚಾರಕ್ಕಾಗಿ ತೆರಳಿದ್ದ ದಚ್ಚುಗೆ ಅಭಿಮಾನಿವೋರ್ವ ಮುಸ್ಲಿಂ ಧರ್ಮದ ಸಂಕೇತವಾಗಿರುವ ಟೋಪಿ ಹಾಗೂ ಶಾಲನ್ನು ಹೊದಿಸಿದರು.
ಅಭಿಮಾನಿ ಹೊದಿಸಿದ ಶಾಲು ಹಾಗೂ ಮುಸ್ಲಿಂ ಟೋಪಿ ಧರಿಸಿಯೇ ದರ್ಶನ್ ಆ ಏರಿಯಾದ ಮುಸ್ಲಿಂ ಬಾಂಧವರ ಬಳಿ ಸುಮಲತಾ ಪರವಾಗಿ ಮತಯಾಚನೆ ಮಾಡಿದರು. ದರ್ಶನ್ಗೆ ನೆನಪಿರಲಿ ಪ್ರೇಮ್ ಹಾಗೂ ನಿತ್ಯಾನಂದ ಸಿನಿಮಾ ಖ್ಯಾತಿಯ ಚೇತನ್ ಸಾಥ್ ನೀಡಿದ್ರು.