ಮಂಡ್ಯ: ಟ್ಯೂಷನ್ಗೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣ್ಯರು, ಜನಪ್ರತಿನಿಧಿಗಳು ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇಂದು ನಟ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚ, ಕೊಲೆಯಾಗಿರುವ ಬಾಲಕಿ ಮನೆಗೆ ತೆರಳಿ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಕಣ್ಣೀರಿಟ್ಟ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಭುವನ್, ಈ ರೀತಿಯ ಘಟನೆ ನಡೆಯಬಾರದು. ಸರ್ಕಾರ ಗಟ್ಟಿಯಾದ ಕಾನೂನು ರಚಿಸಬೇಕಿದೆ. ಬೇರೆ ದೇಶಗಳಲ್ಲಿ ಕಠಿಣ ಶಿಕ್ಷೆ ಜಾರಿ ಇದೆ. ಇಲ್ಲಿಯೂ ಕಠಿಣ ಶಿಕ್ಷೆ ಜಾರಿ ಮಾಡಿ ನಡು ಬೀದಿಯಲ್ಲಿ ಹೂತು ಹಾಕಿದರೆ ಮುಂದೆ ಬೇರೆಯವರು ಇಂತಹ ಕೃತ್ಯ ಎಸಗಲು ಎದುರುತ್ತಾರೆ. ತಪ್ಪಿತಸ್ಥರು ಜೈಲಿಗೆ ಹೋಗಿ ಹೊರ ಬರುತ್ತಾರೆ. ನ್ಯಾಯ ಮಾತ್ರ ಸಿಗಲ್ಲ. ಹೆಣ್ಣನ್ನು ನಾವು ದೇವತೆ ರೀತಿ ಪೂಜಿಸುತ್ತೇವೆ ಆದರೆ ಇಲ್ಲಿ ಆಗಿರುವ ಈ ಘಟನೆ ಬಹಳ ನೀಚ ಕೃತ್ಯ. ಆರೋಪಿಗೆ ತಕ್ಕ ಶಾಸ್ತಿ ಆಗಬೇಕಿದೆ ಎಂದರು.
ಇದನ್ನೂ ಓದಿ: ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ.. ಮಂಡ್ಯದಲ್ಲಿ ಅನಧಿಕೃತ ಟ್ಯೂಷನ್ ಕೇಂದ್ರಗಳಿಗೆ ಬ್ರೇಕ್
ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜನೀಯವಾಗಿ ಕಾಣುತ್ತೇವೆ. ಆದರೆ ಇಂತಹ ಹೇಯ ಕೃತ್ಯದಿಂದ ಜನ ತಲೆ ತಗ್ಗಿಸುವಂತಾಗಿದೆ. ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಯಾರನ್ನೂ ನಂಬುವ ಪರಿಸ್ಥಿತಿ ಈಗಿಲ್ಲ. ಈ ಘಟನೆ ಮತ್ತೆ ಮರುಕಳಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದರು.
ಇದನ್ನೂ ಓದಿ: ಮಂಡ್ಯ: ಟ್ಯೂಷನ್ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್ಗೆ ಎಸೆದ ಕಿರಾತಕ
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ತಪ್ಪಿತಸ್ಥರಿಗೆ ತಕ್ಷಣವೇ ಶಿಕ್ಷೆ ಆಗಬೇಕು. ಆಗ ಮಾತ್ರ ಇಂತಹ ಕೃತ್ಯ ಮಾಡೋ ಯೋಚನೆ ಕೂಡ ತಲೆಗೆ ಬರಲ್ಲ. ಶಿಕ್ಷೆಯ ಭಯ ಇದ್ದಾಗ ಮಾತ್ರ ಹೆಣ್ಣು ಮಗುವನ್ನು ನೋಡುವ ದೃಷ್ಟಿ ಬದಲಾಗುತ್ತೆ ಎಂದರು.