ETV Bharat / state

ಮಂಡ್ಯ: ಕಾವೇರಿ ನೀರಾವರಿ ನಿಗಮದ ಮೂವರು ಸಿಬ್ಬಂದಿ ಎಸಿಬಿ ಬಲೆಗೆ - ಶ್ರೀರಂಗಪಟ್ಟಣ

ಕೆಆರ್​​ಎಸ್​ನ ಕಾವೇರಿ ನೀರಾವರಿ ನಿಗಮದ ಮೂವರು ಸಿಬ್ಬಂದಿಯನ್ನು ಎಸಿಬಿ ವಶಕ್ಕೆ ಪಡೆದಿದೆ.

ACB Raid on CNNL office
ಮೂವರು ಸಿಬ್ಬಂದಿ ಎಸಿಬಿ ಬಲೆಗೆ
author img

By

Published : Aug 10, 2021, 10:41 AM IST

Updated : Aug 10, 2021, 10:53 AM IST

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆ‌ಆರ್​ಎಸ್​ನಲ್ಲಿ ಮೂವರು ಸರ್ಕಾರಿ ನೌಕರರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಕೆಆರ್​ಎಸ್​ನ ಕಾವೇರಿ ನೀರಾವರಿ ನಿಗಮ ಕಚೇರಿಯ ಈ ಸಿಬ್ಬಂದಿ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದ ತಂಡ, ಲೆಕ್ಕ ಪರಿಶೋಧನಾ ಅಧೀಕ್ಷಕ ಕರೀಗೌಡ, ಲೆಕ್ಕಾಧಿಕಾರಿ ರಾಮಚಂದ್ರು ಹಾಗು ಎಫ್​​ಡಿಎ ಸುರೇಶ್ ಎಂಬವರನ್ನು ವಶಕ್ಕೆ ಪಡೆಯಿತು.

ಇದನ್ನೂ ಓದಿ: ಮಂಡ್ಯದ ಬೇಬಿ ಬೆಟ್ಟದಲ್ಲಿ ಸ್ಫೋಟಕ ವಸ್ತು ಪತ್ತೆ

ಒಂದೂವರೆ ಲಕ್ಷ ರೂ ವೆಚ್ಚದ ಕಾಮಗಾರಿ ನಡೆಸಿದ್ದ ಗುತ್ತಿಗೆದಾರ ಸಚಿನ್ ಕೃಷ್ಣಮೂರ್ತಿ ಎಂಬವರಿಗೆ ಬಿಲ್ ಬಿಡುಗಡೆ ಮಾಡಲು ಈ ಮೂವರು 8 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.

Last Updated : Aug 10, 2021, 10:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.