ಮಂಡ್ಯ: ಕೋವಿಡ್ ಸೋಂಕಿನಿಂದ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 1,120 ಸೋಂಕಿತರು ಗುಣಮುಖರಾಗಿದ್ದು, ಜನರ ಆತಂಕವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ.
ಈವರೆಗೆ 46,407 ಮಂದಿ ಚೇತರಿಕೆ ಕಂಡಿದ್ದಾರೆ. ಜಿಲ್ಲೆಯಲ್ಲಿ ನಿನ್ನೆ 10 ಜನ ಸಾವನ್ನಪ್ಪಿದ್ದು, ಈವರೆಗೆ ಕೋವಿಡ್‌ನಿಂದ 382 ಮಂದಿ ಮೃತಪಟ್ಟಿದ್ದಾರೆ. 734 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ವಕ್ಕರಿಸಿದೆ. ಈ ಮೂಲಕ ಸೋಂಕಿತರ ಸಂಖ್ಯೆ 53,749ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,958 ಇದೆ.
ತಾಲೂಕುವಾರು ಪ್ರಕರಣಗಳು:
ಮಂಡ್ಯ 212, ಮದ್ದೂರು 119, ಮಳವಳ್ಳಿ 89, ಪಾಂಡವಪುರ 87, ಶ್ರೀರಂಗಪಟ್ಟಣ 70, ಕೆ.ಆರ್.ಪೇಟೆ 91, ನಾಗಮಂಗಲ 61 ಹಾಗು ಹೊರ ಜಿಲ್ಲೆಯಿಂದ ಬಂದ 5 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!