ಗಂಗಾವತಿ: ಧಾರ್ಮಿಕ ಪೂಜೆ ಹಾಗೂ ವಾರಸತ್ವ ವಿಚಾರದಿಂದಲೇ ಹೆಚ್ಚು ಸದ್ದು ಮಾಡಿರುವ ತಾಲೂಕಿನ ಐತಿಹಾಸಿಕ ಮಾಧ್ವ ಪರಂಪರೆಯ ನವವೃಂದಾವನ ಗಡ್ಡೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಪದ್ಮನಾಭ ತೀರ್ಥರ ಆರಾಧನೆ ಆರಂಭವಾಗಲಿದೆ.
ಡಿ. 12ರಿಂದ 13ರ ಮಧ್ಯಾಹ್ನದವರೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳಿಗೆ ಹಾಗೂ 13ರ ಮಧ್ಯಾಹ್ನದಿಂದ 14ರ ಸಂಜೆವರೆಗೂ ಉತ್ತರಾದಿ ಮಠದ ಅನುಯಾಯಿಗಳಿಗೆ ಪೂಜೆಯ ಸಮಯ ನಿಗದಿ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ: ಗೊಬ್ಬರ ತಯಾರಿಸುವ 'ಭೂ ಸಿರಿ', ಮಣ್ಣು ಪರೀಕ್ಷಿಸುವ 'ಭೂ ಮಿತ್ರ' ಯಂತ್ರಗಳ ಲೋಕಾರ್ಪಣೆ
ಕಳೆದ ಎರಡು ದಶಕದಿಂದ ಪೂಜೆ, ಧಾರ್ಮಿಕ ವಿಧಿ ವಿಧಾನಕ್ಕೆ ಸಂಬಂಧಿಸಿದಂತೆ ಎರಡೂ ಮಠಗಳ ಮಧ್ಯೆ ವಿವಾದ ನಡೆಯುತ್ತಿದ್ದು, ವಿವಾದ ಇತ್ಯರ್ಥ ಆಗೋವರೆಗೂ ವಿವಿಧ ನ್ಯಾಯಾಲಯಗಳು ಎರಡೂ ಮಠಕ್ಕೆ ಆರಾಧನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸುತ್ತಾ ಬಂದಿವೆ.

ಡಿ. 12ರಿಂದ 14ರವರೆಗೆ ಪದ್ಮನಾಭ ತೀರ್ಥರ ಉತ್ತರ ಆರಾಧನೆ, ಮಧ್ಯಾರಾಧನೆ ಹಾಗೂ ಪೂರ್ವರಾಧನೆ ನಡೆಯುತ್ತದೆ. ತುಂಗಭದ್ರಾ ನದಿಯ ತಟದಲ್ಲಿರುವ ಒಂಬತ್ತು ಯತಿಗಳ (ನವ ವೃಂದಾವನ) ತಪೋ ಭೂಮಿಯಲ್ಲಿ ಪ್ರತಿ ವರ್ಷವೂ ನಾನಾ ಯತಿಗಳ ಆರಾಧನಾ ಮಹೋತ್ಸವ ನಡೆಯುತ್ತದೆ.