ETV Bharat / state

ಹೆಸರೂರ ಗ್ರಾಮದಲ್ಲಿ ಹೆಸರಿಗೆ ಮಾತ್ರ ಇದೆ ಶುದ್ಧ ನೀರಿನ ಘಟಕ - water filters not working

ಹೆಸರೂರು ಗ್ರಾಮದಲ್ಲಿ ಅಳವಡಿಸಿರುವ ಎರಡು ಶುದ್ದ ನೀರಿನ ಘಟಕಗಳು ಕೆಟ್ಟುಹೋಗಿದ್ದು, ಅವುಗಳನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ಧಾರೆ.

water filters
ಶುದ್ದ ನೀರಿನ ಘಟಕ
author img

By

Published : Feb 22, 2021, 1:03 PM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ದೋಟಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಸರೂರು ಗ್ರಾಮದಲ್ಲಿ ಅಳವಡಿಸಿರುವ ಎರಡು ಶುದ್ದ ನೀರಿನ ಘಟಕಗಳು ಹೆಸರಿಗೆ ಮಾತ್ರ ಇದ್ದು ಅಪ್ರಯೋಜಕವಾಗಿದೆ.

ಗ್ರಾಮದಲ್ಲಿ ಜನರು ಶುದ್ದ ನೀರು ಸೇವಿಸಲು ಪೂರಕವಾಗಿ ಶಾಲೆಯ ಬಳಿ ಹಾಗೂ ಜನತಾ ಕಾಲೋನಿಯಲ್ಲಿ ಪ್ರತ್ಯೇಕ ಶುದ್ದ ನೀರಿನ ಘಟಕ ಅಳವಡಿಸಲಾಗಿದೆ. ಜನತಾ ಕಾಲೋನಿಯ ಬಳಿ ಇರುವ ಶುದ್ದ ನೀರಿನ ಘಟಕ ಬಂದ್ ಆಗಿ ವರ್ಷವಾಗಿದ್ದು, ಮರು ದುರಸ್ತಿ ಕೂಡ ಆಗಿಲ್ಲ. ಇನ್ನೊಂದು ಶಾಲೆಯ ಬಳಿ ಇರುವ ಘಟಕಕ್ಕೆ ಬರೀ ಕ್ಯಾಬಿನ್ ಅಳವಡಿಸಿದ್ದು ಯಂತ್ರಗಳ ಜೋಡಣೆ ಸಾಧ್ಯವಾಗಿಲ್ಲ.

ಬೇಸಿಗೆ ಸಮೀಪಿಸುತ್ತಿದ್ದು ದೋಟಿಹಾಳ ಗ್ರಾಮ ಪಂಚಾಯಿತಿಯ ಹೊಸ ಆಡಳಿತ ಮಂಡಳಿ ತುರ್ತಾಗಿ ಇವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಯಮನೂರ ಕ್ಯಾದಿಗುಪ್ಪ, ಚಂದ್ರಕಾಂತ್ ಎಸ್. ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.