ಕೊಪ್ಪಳ: ನನಗೆ ಸರ್ಕಾರದ ಯೋಜನೆಗಳು ಅರ್ಥವಾಗುತ್ತಿಲ್ಲ, ಹೀಗಾಗಿ ಆಪ್ತ ಸಹಾಯಕರನ್ನು ನೇಮಕ ಮಾಡಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಬೇಡಿಕೆ ಇಟ್ಟು ಪತ್ರ ಬರೆದಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಎಂಬುವವರು ಯಲಬುರ್ಗಾ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಆಪ್ತಸಹಾಯಕರಿಗಾಗಿ ಮನವಿ ಮಾಡಿದ್ದಾರೆ.
"ನಾನು ಅಷ್ಟೊಂದು ಸುಶಿಕ್ಷಿತಳಲ್ಲ, ಇಲಾಖೆಗಳ ಯೋಜನೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ನನಗೆ ಆಪ್ತ ಸಹಾಯಕರನ್ನ ನೇಮಕ ಮಾಡಿ ಎಂದು ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಆಪ್ತ ಸಹಾಯಕರು ಭಾಗವಹಿಸಲು ಅವಕಾಶ ನೀಡುವಂತೆಯೂ ಮನವಿ ಮಾಡಿದ್ದಾರೆ.