ಗಂಗಾವತಿ: ಕಳೆದ ಐದು ತಿಂಗಳ ಹಿಂದೆಯೇ ವರ್ಗಾವಣೆಗೆ ಶಿಫಾರಸು ಆಗಿದ್ದರೂ ಪ್ರಭಾವ ಬಳಸಿ ಉಳಿದಿದ್ದರು ಎಂಬ ಆರೋಪ ಎದುರಿಸುತ್ತಿದ್ದ ನಗರಠಾಣೆಯ ಪಿಐ ಉದಯರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ.
![kn_GVT_01_14_town_pi_ravi_transfer_KAC10005](https://etvbharatimages.akamaized.net/etvbharat/prod-images/5709002_th.jpg)
ಪೊಲೀಸ್ ಇಲಾಖೆಯು ರಾಜ್ಯದ 90 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಜ.13ರಂದು ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಉದಯರವಿ, ರಾಜ್ಯ ಗುಪ್ತವಾರ್ತೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ತಮ್ಮ ಪ್ರಭಾವ ಬಳಸಿ ಬಿಜೆಪಿ ನಾಯಕರ ವಿರೋಧದ ನಡುವೆಯೂ ಗಂಗಾವತಿ ನಗರ ಠಾಣೆಯಲ್ಲಿಯೇ ಉಳಿದುಕೊಂಡಿದ್ದರು ಎಂಬ ಮಾತು ಕೇಳಿ ಬಂದಿತ್ತು. ಈಗ ಇನ್ಸ್‌ಪೆಕ್ಟರ್ ಉದಯ ರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ. ಈ ಸ್ಥಾನಕ್ಕೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟಸ್ವಾಮಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಯಾಗಿದ್ದಾರೆ.