ETV Bharat / state

ರಾಜ್ಯದಲ್ಲೇ ಪ್ರಥಮ: ತಾಲೂಕಾಸ್ಪತ್ರೆಯಲ್ಲಿ ಉಚಿತವಾಗೇ ಮೊಣಕಾಲು ಚಿಪ್ಪು ಬದಲಾವಣೆ

ಈಗಾಗಲೇ ಹತ್ತಾರು ಅಧುನಿಕ ವೈದ್ಯಕೀಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂಬ ಖ್ಯಾತಿ ಪಡೆದಿದೆ ಗಂಗಾವತಿ ತಾಲೂಕಾಸ್ಪತ್ರೆ. ಈಗ ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕು ಹಂತದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಉಚಿತವಾಗಿ ಮೊಣಕಾಲು ಚಿಪ್ಪಿನ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

total-knee-replacement-surgery-in-gangavati

author img

By

Published : Jan 10, 2020, 1:54 PM IST

ಗಂಗಾವತಿ: ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕು ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಉಚಿತ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ (ಟೋಟಲ್‌ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಆಯುಷ್ಮಾನ್ ‌ಭಾರತ ಯೋಜನೆಯಡಿ ಹೊಸಪೇಟೆ ತಾಲೂಕಿನ ಗ್ರಾಮೀಣ ಭಾಗದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಎಂಬ ಇಬ್ಬರು ಹಿರಿಯರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ.

ಪೂರ್ಣ ಪ್ರಮಾಣದ ಉಚಿತ ಮೊಣಕಾಲು ಚಿಪ್ಪು ಬದಲಾವಣೆ

ಶಸ್ತ್ರಚಿಕಿತ್ಸೆ ಮಾಡುವ ಮೊದಲು ರೋಗಿಯು ಮೊಣಕಾಲು ಚಿಪ್ಪಿನ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಯ ನಂತರ ಯಾವುದೇ ತೊಂದರೆ ಇಲ್ಲದೇ ಸಾಮಾನ್ಯರಂತೆ ಓಡಾಡುತ್ತಿದ್ದಾರೆ. ಇದೇ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿದರೆ 2.5 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಹಾಗೂ ಪ್ರತಿ ತಾಲೂಕು ಹಂತದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗಳಲ್ಲಿ ಮಾಡ್ಯುಲರ್‌ ಶಸ್ತ್ರಚಿಕಿತ್ಸಾ ಘಟಕ (ಮಾಡ್ಯುಲರ್‌ ಒಟಿ) ಗಳನ್ನು ಸ್ಥಾಪಿಸಲಾಗಿದೆ. ಅದರಂತೆ ನಮ್ಮಲ್ಲೂ ಇರುವ ಮಾಡ್ಯುಲರ್‌ ಒಟಿಯಲ್ಲಿ ಟೋಟಲ್‌ ನೀ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕು ಹಂತದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ಕೀರ್ತಿ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯ ಸಲಾವುದ್ದೀನ್.

ಈಗಾಗಲೇ ಹತ್ತಾರು ಅಧುನಿಕ ವೈದ್ಯ ಸೌಲಭ್ಯಗಳಿಂದಾಗಿ ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಈ ಆಸ್ಪತ್ರೆಗಿದೆ. ಇದೀಗ ಅತ್ಯುತ್ತಮ ಸೇವೆ ಮೂಲಕ ಮತ್ತೊಂದು ಮೈಲಿಗಲ್ಲು ದಾಖಲಿಸುವ ಮೂಲಕ ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾದಾರಿಯಾಗಿದೆ.

Intro:ತಾಲ್ಲೂಕು ಹಂತದ ಆಸ್ಪತ್ರೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿ ಮಾಡಲಾಗಿದೆ.Body:ರಾಜ್ಯದಲ್ಲಿ ಮೊದಲ ಪ್ರಕರಣ: ಮೊಣಕಾಲು ಚಿಪ್ಪು ಬದಲಾವಣೆ
ಗಂಗಾವತಿ:
ತಾಲ್ಲೂಕು ಹಂತದ ಆಸ್ಪತ್ರೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿ ಮಾಡಲಾಗಿದೆ.
ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ ( ಟೋಟಲ್‌ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.
"ಆಯುಷ್ಮಾನ್ ‌ಭಾರತ ಯೋಜನೆಯಡಿ ಹೊಸಪೇಟೆ ತಾಲ್ಲೂಕಿ ಗ್ರಾಮೀಣ ಭಾಗದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಎಂಬ ಇಬ್ಬರು ಹಿರಿಯರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ" ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ ತಿಳಿಸಿದ್ದಾರೆ.
ಸುಮಾರು ಐದು ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರಾದ ಸಲಾವುದ್ದೀನ್, ರೇಣುಕಾರಾಧ್ಯ, ಸುಜಾತ, ಶಿವರಾಜ ಪಾಟೀಲ್ ಪಾಲ್ಗೊಂಡಿದ್ದರು.
ಈಗಾಗಲೆ ಹತ್ತಾರು ಅಧುನಿಕ ವೈದ್ಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲ್ಲೂಕು ಆಸ್ಪತ್ರೆ ಎಂಬ ಖ್ಯಾತಿವೆತ್ತ ಆಸ್ಪತ್ರೆ ಈಗ ಮತ್ತೊಂದು ಮೈಲಿಗಲ್ಲು ದಾಖಲಿಸಿದೆ.Conclusion:ಈಗಾಗಲೆ ಹತ್ತಾರು ಅಧುನಿಕ ವೈದ್ಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲ್ಲೂಕು ಆಸ್ಪತ್ರೆ ಎಂಬ ಖ್ಯಾತಿವೆತ್ತ ಆಸ್ಪತ್ರೆ ಈಗ ಮತ್ತೊಂದು ಮೈಲಿಗಲ್ಲು ದಾಖಲಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.