ETV Bharat / state

ಹಾಗೂ ಹೀಗೂ ಮಾಡಿ ಬ್ಯಾಂಕ್ ಬಾಗಿಲು ತೆರೆದ್ರು...ಲಾಕರ್ ತೆರೆಯಲಾಗದೆ ಖಾಲಿ ಕೈಲಿ ಹೋದ್ರು.. - ಗಂಗಾವತಿಯ SBI ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನ

ಗಂಗಾವತಿ ನಗರದ SBI ಬ್ಯಾಂಕ್‌ ಶಾಖೆಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಗಂಗಾವತಿಯ SBI ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನ
ಗಂಗಾವತಿಯ SBI ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನ
author img

By

Published : Aug 3, 2021, 6:55 AM IST

ಗಂಗಾವತಿ: ನಗರದ ಹೊರವಲಯ ಕೊಪ್ಪಳ ರಸ್ತೆಯಲ್ಲಿರುವ ವಡ್ಡರಹಟ್ಟಿ ಸಮೀಪದ ಎಸ್‌ಬಿಐ (SBI) ಬ್ಯಾಂಕಿಗೆ ನುಗ್ಗಿದ ಕಳ್ಳರು, ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಮೊದಲಿಗೆ ಮುಸುಕು ಹಾಕಿಕೊಂಡು ಒಂದಿಷ್ಟು ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿದ ಕಳ್ಳರು, ಬಳಿಕ ಬ್ಯಾಂಕಿನ ಮುಖ್ಯ ಬಾಗಿಲು ಒಡೆದು ಒಳಕ್ಕೆ ನುಗ್ಗಿದ್ದಾರೆ. ಬ್ಯಾಂಕಿನಲ್ಲಿ ಹಣ ಹಾಗೂ ಬಂಗಾರದ ಒಡವೆಗಳನ್ನು ಕದಿಯಲು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಯತ್ನಿಸಿದ್ದಾರೆ.

ಆದರೆ ಬ್ಯಾಂಕಿನ ಲಾಕರ್ ತೆಗೆಯಲಾಗದೇ ಕಳ್ಳರು ಎರಡು ಗಂಟೆಗೂ ಹೆಚ್ಚು ಕಾಲ ಕಳ್ಳತನಕ್ಕೆ ಸತತ ಯತ್ನ ನಡೆಸಿ ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಬ್ಯಾಂಕಿನಲ್ಲಿದ್ದ ಅಪಾರ ಪ್ರಮಾಣದ ಒಡವೆ ಹಾಗೂ ನಗದು ಹಣ ಸೇಫ್ ಆಗಿದೆ.

ಇದನ್ನೂ ಓದಿ: "ನನ್ನ ಆ ಆಸೆ ಈಡೇರಿಸಿದ್ರೆ, ಪಾಸಿಂಗ್​ ಪ್ರಮಾಣ ಪತ್ರ ನೀಡುವೆ"..ವಿದ್ಯಾರ್ಥಿನಿಗೆ ಪ್ರಾಂಶುಪಾಲನ ಕಿರುಕುಳ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.