ಗಂಗಾವತಿ: 37 ದಿನಗಳ ಲಾಕ್ಡೌನ್ಗೆ ನಗರದಲ್ಲಿ ಕೊಂಚ ಸಡಲಿಕೆ ನೀಡಿ ಆಯ್ದ ಕೆಲ ವ್ಯಾಪಾರ ವಹಿವಾಟಿಗೆ ಜಿಲ್ಲಾಧಿಕಾರಿ ಅಧಿಕೃತ ಆದೇಶ ನೀಡಿದ ಹಿನ್ನೆಲೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದರು.
ಜಿಲ್ಲಾ ಪೊಲೀಸ್ ಎಸ್ಪಿ ಜಿ.ಸಂಗೀತಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವ ವಲಯದ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ, ಹೇಗೆ ನಿರ್ವಹಿಸಬೇಕು ಎಂಬುವುದರ ಬಗ್ಗೆ ನಾನಾ ವಲಯದ ವರ್ತಕರಿಗೆ ಪೊಲೀಸರು ನಿರ್ದೇಶನ ನೀಡಿದರು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಹಾಗೂ ರಾತ್ರಿ ಎಂಟೂವರೆ ಒಂಭತ್ತು ಗಂಟೆಗೆ ಕಡ್ಡಾಯವಾಗಿ ವಹಿವಾಟು ಮುಗಿಸಬೇಕು ಎಂದು ಎಸ್ಪಿ ಸೂಚನೆ ನೀಡಿದರು.
ಇನ್ನು ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕೊಪ್ಪಳ ಗ್ರೀನ್ ಝೋನ್ ಎಂದ ಮಾತ್ರಕ್ಕೆ ಕೊರೊನಾ ಮುಕ್ತ ಜಿಲ್ಲೆಯಲ್ಲ. ಲಾಕ್ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಅಸಲಿ ಸವಾಲು ಎದುರಾಗಲಿದ್ದು, ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದು ಸಲಹೆ ನೀಡಿದರು.