ETV Bharat / state

ಗಾಂಧಿ ಪುರಸ್ಕಾರ ಪಡೆದ ಗ್ರಾಮದಲ್ಲಿ ಡೆಂಘೀಗೆ ಬಾಲಕ ಬಲಿ..

ಶ್ರೀರಾಮನಗರ ಇತ್ತೀಚೆಗಷ್ಟೆ ಗ್ರಾಮ ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು. ಆದರೆ, ಗ್ರಾಮದಲ್ಲಿ ಕೊಳಚೆ ಪ್ರದೇಶಗಳು, ತಿಪ್ಪೆಗುಂಡಿಗಳು ಹೆಚ್ಚುತ್ತಿದ್ದು ಸದ್ಯ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ.

ಗಾಂಧಿ ಪುರಸ್ಕಾರ ಪಡೆದ ಗ್ರಾಮದಲ್ಲಿ ಡೆಂಗ್ಯೂಗೆ ಬಲಿಯಾದ ಬಾಲಕ
author img

By

Published : Oct 18, 2019, 1:03 PM IST

Updated : Oct 18, 2019, 2:08 PM IST

ಗಂಗಾವತಿ: ಸ್ವಚ್ಛತೆ, ನೈರ್ಮಲ್ಯ ನಿರ್ವಹಣೆಗಾಗಿ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ತಾಲೂಕಿನ ಶ್ರೀರಾಮನಗರದಲ್ಲಿ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ.

ಗಾಂಧಿ ಪುರಸ್ಕಾರ ಪಡೆದ ಗ್ರಾಮದಲ್ಲಿ ಡೆಂಘೀಗೆ ಬಾಲಕ ಬಲಿ..

ಗ್ರಾಮದ ಎರಡನೇ ವಾರ್ಡಿನ ಇಮ್ತಿಯಾಜ್ ಅಬ್ದುಲ್ ಖಾದರ್ ಜಿಲಾನ್(12) ಮೃತ ಬಾಲಕ. ಬಾಲಕನಿಗೆ ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಆತ ಡೆಂಘೀನಿಂದ ಬಳಲುತ್ತಿರುವುದಾಗಿ ವೈದ್ಯಕೀಯ ತಪಾಸಣೆಗಳು ದೃಢಪಡಿಸಿದ್ದವು. ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಬಾಲಕನ ದೇಹದೊಳಗಿನ ಪ್ಲೇಟ್‌ಲೆಟ್ಸ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ.‌ ಹೀಗಾಗಿ ಬಾಲಕನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿ ಆತ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಶ್ರೀರಾಮನಗರ ಇತ್ತೀಚೆಗಷ್ಟೆ ಗ್ರಾಮ ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು.ಆದರೆ, ಗ್ರಾಮದಲ್ಲಿ ಕೊಳಚೆ ಪ್ರದೇಶಗಳು, ತಿಪ್ಪೆಗುಂಡಿಗಳು ಹೆಚ್ಚುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ. ಇದರಿಂದಾಗಿ ಇಂತಹ ಮಾರಣಾಂತಿಕ ಖಾಯಿಲೆಗಳು ಹರಡುತ್ತಿವೆ ಎಂದು ಸ್ಥಳೀಯರು ಗ್ರಾಮ ಪಂಚಾಯತ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಸ್ವಚ್ಚತೆ ನೈರ್ಮಲ್ಯ ನಿರ್ವಹಣೆಗಾಗಿ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ತಾಲ್ಲೂಕಿನ ಶ್ರೀರಾಮನಗರದಲ್ಲಿ ಬಾಲಕನೊಬ್ಬ ಡೆಂಗಿ ಜ್ವರಕ್ಕೆ ಸಾವನ್ನಪ್ಪಿದ್ದಾನೆBody:ಗಾಂಧಿ ಪುರಸ್ಕಾರ ಪಡೆದ ಗ್ರಾಮದಲ್ಲಿ ಡೆಂಗಿಗೆ ಬಾಲಕ ಬಲಿ
ಗಂಗಾವತಿ:
ಸ್ವಚ್ಚತೆ ನೈರ್ಮಲ್ಯ ನಿರ್ವಹಣೆಗಾಗಿ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ತಾಲ್ಲೂಕಿನ ಶ್ರೀರಾಮನಗರದಲ್ಲಿ ಬಾಲಕನೊಬ್ಬ ಡೆಂಗಿ ಜ್ವರಕ್ಕೆ ಸಾವನ್ನಪ್ಪಿದ್ದಾನೆ.
ಗ್ರಾಮದ ಎರಡನೇ ವಾರ್ಡಿನ ಇಮ್ತಿಯಾಜ್, ಅಬ್ದುಲ್ ಖಾದರ್ ಜಿಲಾನ್ (12) ಮೃತ ಬಾಲಕ.
ಬಾಲಕನಿಗೆ ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು,
ಡೆಂಗ್ಯೂ ಎಂದು ವೈದ್ಯಕೀಯ ತಪಾಸಣೆಗಳು ದೃಢಪಡಿಸಿವೆ.
ಜ್ವರಕಾಣಿಸಿಕೊಂಡ ಬೆನ್ನಲ್ಲೆ ಬಾಲಕನ ದೇಹದೊಳಗೆ ಪ್ಲೇಟ್ಲೆಟ್ ಕೌಂಟ್ ಗಣನೀಯ ಪ್ರಮಾದಲ್ಲಿ ಕುಸಿತವಾಗಿದೆ‌ ಹೀಗಾಗಿ ಬಾಲಕನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿದ ಪರಿಣಾಮ
ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೆ ಗ್ರಾಮ ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು. ಆದರೆ ಗ್ರಾಮದಲ್ಲಿ
ಅಸ್ವಚ್ಚತೆ, ತಿಪ್ಪೆಗುಂಡಿಗಳು ಸಂಗ್ರಹವಾಗಿ ಸೊಳ್ಳೆ ಹರಡಲು ಕಾರಣವಾಗಿದೆ ಎಂದು ಸ್ಥಳಿಯರು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:ಇತ್ತೀಚೆಗಷ್ಟೆ ಗ್ರಾಮ ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು. ಆದರೆ ಗ್ರಾಮದಲ್ಲಿ
ಅಸ್ವಚ್ಚತೆ, ತಿಪ್ಪೆಗುಂಡಿಗಳು ಸಂಗ್ರಹವಾಗಿ ಸೊಳ್ಳೆ ಹರಡಲು ಕಾರಣವಾಗಿದೆ ಎಂದು ಸ್ಥಳಿಯರು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Oct 18, 2019, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.