ETV Bharat / state

ವಿದೇಶಿಗರ ನೆಚ್ಚಿನ ತಾಣ ವಿರುಪಾಪುರ ರೆಸಾರ್ಟ್​ ತೆರವಿಗೆ ಸುಪ್ರೀಂ ಆದೇಶ

author img

By

Published : Feb 11, 2020, 3:25 PM IST

ವಿದೇಶಿಗರ ನೆಚ್ಚಿನ ತಾಣ ವಿರುಪಾಪುರ ಗಡ್ಡೆಯಲ್ಲಿರುವ ಎಲ್ಲಾ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಹಾಗೂ ಅತಿಥಿ ಗೃಹಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

kn_GVT_01_11_foreigners_hotspot_suprim_order_to_demolition_KAC10005
ವಿದೇಶಿಗರ ನೆಚ್ಚಿನ ತಾಣ ವಿರುಪಾಪುರ ರೆಸಾರ್ಟ್​ ತೆರವಿಗೆ ಸುಪ್ರೀಂ ಆದೇಶ

ಗಂಗಾವತಿ: ವಿದೇಶಿಗರ ನೆಚ್ಚಿನ ತಾಣ ವಿರುಪಾಪುರ ಗಡ್ಡೆಯಲ್ಲಿರುವ ಎಲ್ಲಾ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಹಾಗೂ ಅತಿಥಿ ಗೃಹಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸಣಾಪುರ ಗ್ರಾಮದ‌ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಹಾಗೂ ಕೃಷಿ ಭೂಮಿಯನ್ನು ಪರಿವರ್ತಿಸದೇ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತ ತೆರವಿಗೆ ಮುಂದಾಗಿದ್ದವು. ಇದನ್ನು ಪ್ರಶ್ನಿಸಿ ಗಡ್ಡೆಯಲ್ಲಿನ ಸುಮಾರು 15ಕ್ಕೂ ಹೆಚ್ಷು ರೆಸಾರ್ಟ್ ಮಾಲೀಕರು ಧಾರವಾಡದ ಹೈಕೋರ್ಟ್ ಗೆ ದಾವೆ ಹಾಕಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸರ್ಕಾರದ ದೂರನ್ನು ಪುರಸ್ಕರಿಸಿ ಬೆಂಗಳೂರು ಹೈಕೋರ್ಟ್ ಧಾರವಾಡದ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್ ಗಳ ಮಾಲೀಕರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ನಾಲ್ಕು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ವ್ಯಾಜ್ಯ ಇದೀಗ ಇತ್ಯರ್ಥವಾಗಿದ್ದು, ಜಿಲ್ಲಾಡಳಿತಕ್ಕೆ ತೆರವು ಕಾರ್ಯಾಚರಣೆ ‌ನಡೆಸುವಂತೆ ಸೂಚಿಸಿದೆ.

ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಮಾಲೀಕರು ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ಜಿಲ್ಲಾಡಳಿತವೇ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ನೀಡಿದ್ದ ಅದೇಶದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ವಿದೇಶಿಗರ ತಾಣದಲ್ಲಿ ಅಕ್ರಮ‌ ಚಟುವಟಿಕೆ, ಮಾದಕ ದ್ರವ್ಯಗಳ ಸರಬರಾಜು, ಅರಣ್ಯ ಒತ್ತುವರಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘನೆಯಂತ ಹತ್ತಾರು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದಾಗ ರೆಸಾರ್ಟ್ ಮಾಲೀಕರು ಕೋರ್ಟ್ ಮೊರೆ ಹೋಗುತ್ತಿದ್ದರು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಇದೀಗ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.