ಗಂಗಾವತಿ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನ ಹೆಚ್ಚಿನ ಪ್ರಮಾಣದಲ್ಲಿ ಸೇರಬಾರದು ಎಂಬ ಕಾರಣಕ್ಕೆ ನಗರದಲ್ಲಿ ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಯಂತಿದ್ದ ಸಂಡೆ ಬಜಾರ್ಗೆ ಕಡಿವಾಣ ಹಾಕಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ, ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಭಾನುವಾರ ಸಂಡೆ ಬಜಾರ್ ನಿರ್ವಹಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಸಂಡೆ ಬಜಾರ್ ಆರಂಭವಾಗಿದೆ ಎಂಬ ಮಾಹಿತಿ ಹಿನ್ನೆಲೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಕೊಳ್ಳಲು ಜನ ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ಅಲ್ಲದೇ ಪೊಲೀಸರು ಕೂಡ ಸಂಡೆ ಬಜಾರ್ ನಿರ್ವಹಕರ ಸಭೆ ನಡೆಸಿ ವಾಹನ ಮಾರಾಟ, ಕೊಳ್ಳುವುದು ಬಂದ್ ಮಾಡುವಂತೆ ಸೂಚನೆ ನೀಡಿದ್ದರು. ಜಿಲ್ಲೆಯಲ್ಲಿ ಕೊರೊನಾದ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸಂಡೆ ಬಜಾರ್ ಸ್ಥಗಿತಕ್ಕೆ ಆದೇಶ ನೀಡಿದ್ದರು.
ಆದರೆ, ಸಂಡೆ ಬಜಾರ್ ನಿರ್ವಾಹಕರು ಇದೀಗ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಭಾನುವಾರ ಯಥಾ ಪ್ರಕಾರ ಸಂಡೇ ಬಜಾರ್ ನಿರ್ವಹಿಸಿದರು. ಇದೀಗ ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ಸಂಡೆ ಬಜಾರ್ ಸವಾಲಾಗಿ ಪರಿಣಮಿಸಿದೆ.