ಕೊಪ್ಪಳ: ತಮಗೂ ಲ್ಯಾಪ್ಟಾಪ್ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕರಿಗೆ ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂದು ಶಾಸಕ ಹಾಲಪ್ಪ ಆಚಾರ್ ಲ್ಯಾಪ್ಟಾಪ್ ವಿತರಿಸಲು ಆಗಮಿಸಿದ ವೇಳೆ, ಪದವಿ ಹಂತದ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಸಹ ತಮಗೂ ಸರ್ಕಾರದಿಂದ ಲ್ಯಾಪ್ಟಾಪ್ ನೀಡುವಂತೆ ಆಗ್ರಹಿಸಿ ಶಾಸಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದನ್ನು ಕಂಡು ಶಾಸಕ ಹಾಲಪ್ಪ ಆಚಾರ್, ಈ ಕೂಡಲೇ ದ್ವೀತಿಯ, ತೃತೀಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುವ ಭರವಸೆ ನೀಡಿ ಸಮಾಧಾನಗೊಳಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.