ETV Bharat / state

ಬರೀ 6 ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತ ಕಲ್ಯಾಣ.. ಇದು ಸಿಂಪಲ್ಲಾಗ್‌ ಒಂದ್‌ ಮದುವೆ!!

ಕನಕಗಿರಿ ಪಟ್ಟಣದ ನಿವಾಸಿ ತಿಪ್ಪಾರೆಡ್ಡಿ ಅವರ ಪುತ್ರ ರಾಜಶೇಖರ್​ ರೆಡ್ಡಿ ಹಾಗೂ ರಾಯಚೂರು ಜಿಲ್ಲೆ ಯಾಪಲಪರ್ವಿ ಗ್ರಾಮದ ಅರ್ಚನಾ ಎಂಬುವರ ವಿವಾಹ ಜರುಗಿದೆ.

author img

By

Published : Apr 5, 2020, 4:30 PM IST

simple marraige in kanakagiri
6 ಜನರ ಸಮ್ಮುಖದಲ್ಲಿ ನಡೆದ ಶಾಸ್ತ್ರೋಕ್ತ ವಿವಾಹ

ಕೊಪ್ಪಳ : ಕೇವಲ ಆರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಈ ನವ ಜೋಡಿ ಕಾಲಿಟ್ಟಿದೆ.ಲಾಕ್​ಡೌನ್ ಹಿನ್ನೆಲೆ ಜಿಲ್ಲೆಯ ಕನಕಗಿರಿ ಪಟ್ಟದಲ್ಲಿ ಸರಳ,ಶಾಸ್ತ್ರೋಕ್ತ

ದಾಂಪತ್ಯ ಜೀವನಕ್ಕೆ ರಾಜಶೇಖರ್ ಹಾಗೂ ಅರ್ಚನಾ ಕಾಲಿಟ್ಟಿದ್ದಾರೆ. ಕೇವಲ ಆರು ಜನ ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಲಾಕ್​ಡೌನ್ ಹಿನ್ನೆಲೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಸಪ್ತಪದಿ ತುಳಿದ ಈ ಜೋಡಿಯ ನಡೆ ಎಲ್ಲರ ಗಮನ ಸೆಳೆದಿದೆ. ಕನಕಗಿರಿ ಪಟ್ಟಣದ ನಿವಾಸಿ ತಿಪ್ಪಾರೆಡ್ಡಿ ಅವರ ಪುತ್ರ ರಾಜಶೇಖರ್​ ರೆಡ್ಡಿ ಹಾಗೂ ರಾಯಚೂರು ಜಿಲ್ಲೆ ಯಾಪಲಪರ್ವಿ ಗ್ರಾಮದ ಅರ್ಚನಾ ಎಂಬುವರ ವಿವಾಹ ಜರುಗಿದೆ. ರಾಜಶೇಖರ್​ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದಾರೆ. ಮುಂಚೆಯೇ ಮದುವೆಯ ದಿನಾಂಕ ನಿಗದಿ ಮಾಡಲಾಗಿತ್ತು. ಆಮಂತ್ರಣ ಪತ್ರಗಳನ್ನೂ ಹಂಚಲಾಗಿತ್ತು.

ನಿಗದಿತ ದಿನದಂದು ವಧುವಿನ ಕಡೆಯಿಂದ ಮೂವರು, ವರನ ಕಡೆಯಿಂದ ಮೂವರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.