ETV Bharat / state

ಕೊರೊನಾ ಭೀತಿ ಹಿನ್ನೆಲೆ: ಈ ಬಾರಿ ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ ಆಚರಣೆ - ಶ್ರೀ ಗವಿಸಿದ್ದೇಶ್ವರ ಜಾತ್ರೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸರಳ ರೀತಿಯಲ್ಲಿ ನಡೆಯಲಿದೆ. ಮಹಾರಥೋತ್ಸವದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಚಾನೆಲ್​ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ

gavisiddheshwara
gavisiddheshwara
author img

By

Published : Jan 15, 2021, 9:53 AM IST

ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಗವಿಮಠದ ಜಾತ್ರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ನಡೆಯತ್ತೋ, ಇಲ್ಲವೋ ಎಂಬ ಗೊಂದಲಕ್ಕೆ ಶ್ರೀ ಗವಿಮಠ ಪೂರ್ಣವಿರಾಮ ಹಾಕಿದೆ.

ಈ ಬಾರಿ ನಡೆದ ಮೈಸೂರು ದಸರಾ, ಪುರಿ ಜಗನ್ನಾಥ ರಥೋತ್ಸವದ ಮಾದರಿಯಲ್ಲಿ ಸರಳ ರೀತಿಯಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ ಎಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ

ಈ ಕುರಿತಂತೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆ ನೀಡಿದ್ದು "ಇದು ದೈವೇಚ್ಛೆ ಭಕ್ತರ ನಿರೀಕ್ಷೆ ಇವೆರಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನು ನಡೆಸಬೇಕು, ಸರ್ಕಾರದ ಆದೇಶವನ್ನೂ‌ ಪಾಲಿಸಬೇಕು. ಕಾನೂನನ್ನು ಮೀರಬಾರದು, ಸಂಪ್ರದಾಯವನ್ನು ಮುರಿಯಬಾರದು. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಒಳಿತಿಗಾಗಿ ಎಂಬ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆಯನ್ನು ಸರಳ ಮತ್ತು ವೈಶಿಷ್ಠ್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸೋಣ. ಇಷ್ಟು ಸಮಯ ಮಠದ ಅಂಗಳದಲ್ಲಿ ಗವಿಸಿದ್ದೇಶ್ವರನ ರಥ ಎಳೆಯುತ್ತಿತ್ತು. ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ. ಅದನ್ನು ಗವಿಸಿದ್ದೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ" ಎಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ಭಕ್ತಗಣಕ್ಕೆ ತಿಳಿಸಿದ್ದಾರೆ.

ಗವಿಮಠ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಚರ್ಚಿಸಿ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಪ್ರತಿವರ್ಷ ಜಾತ್ರೆ ನಿಮಿತ್ತ ನಡೆಯುತ್ತಿದ್ದ ವಿದ್ಯಾರ್ಥಿ ಜಾಥಾ ಇರುವುದಿಲ್ಲ. ಕೆರೆಯ ದಡದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು, ತೆಪ್ಪೋತ್ಸವ ರದ್ದುಪಡಿಸಲಾಗಿದೆ. ಜನವರಿ 30ರಂದು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಪುರಿ ಜಗನ್ನಾಥ, ಮೈಸೂರು ದಸಾರಾ ಜಂಬೂಸವಾರಿ ಮಾದರಿಯಲ್ಲಿ ಸಾಂಪ್ರದಾಯಿಕವಾಗಿ ಸರಳವಾಗಿ ರಥೋತ್ಸವ ನಡೆಯಲಿದೆ. ಕೈಲಾಸ ಮಂಟಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ಇರುವುದಿಲ್ಲ. ಜನವರಿ 31ರಂದು ಬಳಗಾನೂರು ಶರಣರಿಂದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಇರುತ್ತದೆ. ಆದರೆ, ಭಕ್ತರು ಅವರ ಹಿಂದೆ ದೀರ್ಘದಂಡ ನಮಸ್ಕಾರ ಹಾಕುವುದನ್ನು ರದ್ದುಪಡಿಸಲಾಗಿದೆ. ಶರಣರ ದೀರ್ಘದಂಡ ನಮಸ್ಕಾರ ದಿನದಂದು ಹೊರತುಪಡಿಸಿ ಭಕ್ತರು ತಮಗೆ ಅನುಕೂಲವಾದ ದಿನದಂದು ಹರಕೆ ಅಥವಾ ಸಂಕಲ್ಪ ಪೂರೈಸಬಹುದು ಎಂದು ಶ್ರೀಮಠ ತಿಳಿಸಿದೆ.‌

ಇನ್ನು ಜನವರಿ 31ರಂದು ಸಿದ್ದೇಶ್ವರ ಮೂರ್ತಿ ಮೆರವಣಿಗೆ, ಮದ್ದು ಸುಡುವುದು ಇರುವುದಿಲ್ಲ. ಮಹಾದಾಸೋಹವನ್ನು ಮೂರು ದಿನಗಳಿಗೆ ಈ ಬಾರಿ ಸೀಮಿತಗೊಳಿಸಲಾಗಿದೆ. ಜನವರಿ 30, 31 ಹಾಗೂ ಫೆಬ್ರವರಿ 1ರಂದು ಮಹಾದಾಸೋಹ ನಡೆಯಲಿದೆ. ಭಕ್ತರು ಮಠಕ್ಕೆ ರೊಟ್ಟಿ, ಸಿಹಿ ಖಾದ್ಯಗಳನ್ನು ತರಬಾರದು. ಮಠ ಅದನ್ನು ಸ್ವೀಕರಿಸುವುದಿಲ್ಲ. ಜಾತ್ರೆಯ ಆವರಣದಲ್ಲಿ ಯಾವುದೇ ರೀತಿಯ ಅಂಗಡಿಗಳು, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಶ್ರೀಮಠ ತಿಳಿಸಿದೆ.

ಅಲ್ಲದೇ ಜನವರಿ 30ರಂದು ನಡೆಯುವ ಮಹಾರಥೋತ್ಸವದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಚಾನೆಲ್​ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಭಕ್ತರು ಶ್ರೀಮಠದ ಆವರಣಕ್ಕೆ ಬರದೇ ತಾವಿರುವ ಸ್ಥಳದಲ್ಲಿಯೇ ರಥ ದರ್ಶನ ಮಾಡಿಕೊಳ್ಳುವಂತೆ ಶ್ರೀಮಠ ಭಕ್ತರದಲ್ಲಿ ಕೋರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.