ETV Bharat / state

ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತವರು ಕಾಂಗ್ರೆಸ್ ನವರು: ಸಿದ್ದರಾಮಯ್ಯ - Etv Bharat Kannada

ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಪಿಎಂಗೆ ಪತ್ರ ಬರೆದು ತನಿಖೆ ನಡೆಸಲು ಕೋರಿದ್ದರು. ಆದರೇ, ಸರ್ಕಾರ ದಾಖಲಾತಿ ಕೇಳುತ್ತಿದೆ. ನನ್ನ ಅವಧಿಯಲ್ಲಿ ಆರೋಪಗಳು ಬಂದಾಗ ದಾಖಲಾತಿ ಕೇಳದೇ ಪ್ರಕರಣಗಳು ಸಿಬಿಐಗೆ ವಹಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

KN_KPL__01
ಸಿದ್ದರಾಮಯ್ಯ
author img

By

Published : Oct 10, 2022, 10:58 PM IST

ಕೊಪ್ಪಳ: ಗಾಂಧೀಜಿ ಅವರನ್ನು ಕೊಂದ ಗೋಡ್ಸೆನ ಭಾವಚಿತ್ರಕ್ಕೆ ಬಿಜೆಪಿ ಅವರು ಪೂಜೆ ಮಾಡುತ್ತಾರೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟ ಪಕ್ಷವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತವರು ಕಾಂಗ್ರೆಸ್ ನವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಆರ್‌ಎಸ್‌ಎಸ್ ಹೇಳಿದ್ದೇ ಕಾನೂನಾಗುತ್ತದೆಯೇ? ಮುಸ್ಲಿಮರಿಗೆ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಲು ಅವರು ಯಾರು? ಯತ್ನಾಳ್ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದರು.

ಬಿಜೆಪಿ ವಿರುದ್ದ ಸಿದ್ದರಾಮಯ್ಯ ಆರೋಪ

ಒಳ ಮೀಸಲಾತಿಗೆ ಎಲ್ಲರ ಒಮ್ಮತವಿಲ್ಲ. ಲಂಬಾಣಿ, ಭೋವಿ ಸಮುದಾಯಗಳು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಒಳಮೀಸಲಾತಿ ನೀಡುವುದು ಕಷ್ಟವಾಗಲಿದೆ ಎಂದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಅವಕಾಶ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ ಎಂದರು.

ಈಶ್ವರಪ್ಪ ಯಾವ ಖುಷಿಗೆ ರಾಜಿನಾಮೆ ಕೊಟ್ಟ: ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ನನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಂಡ ಇದರಿಂದ ಈಶ್ವರಪ್ಪ ರಾಜಿನಾಮೆಕೊಟ್ಟ. ಈಶ್ವರಪ್ಪ ರಾಜಿನಾಮೇ ಕೊಟ್ಟಿದ್ದು ಖುಷಿಗಲ್ಲ ತಪ್ಪಮಾಡಿದ್ದಕ್ಕೆ. ಶೇ.40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಸಿಎಂ, ರಾಜ್ಯಪಾಲರನ್ನು ಭೇಟಿಯಾಗಿ ಪಿಎಂಗೆ ಪತ್ರ ಬರೆದು ನ್ಯಾಯಾಂಗ ತನಿಖೆ ನಡೆಸಲು ಕೋರಿದ್ದಾರೆ. ಆದರೆ, ಸರ್ಕಾರ ದಾಖಲಾತಿ ಕೇಳುತ್ತಿದೆ.

ನನ್ನ ಅವಧಿಯಲ್ಲಿ ಆರೋಪಗಳು ಕೇಳಿ ಬಂದಾಗ ದಾಖಲಾತಿ ಕೇಳದೇ ಸಿಬಿಐಗೆ ವಹಿಸಿದ್ದೆನು. ಡಿ.ಸಿ.ರವಿ, ಗಣಪತಿ, ಲಾಟರಿ, ಮೆಸ್ತಾ, ಸೌಜನ್ಯ ಸೇರಿ ಹಲವು ಪ್ರಕರಣ ಸಿಬಿಐಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಈಗೀರುವ ಡಬಲ್ ಇಂಜಿನ್ ಸರಕಾರ ನಡೆದುಕೊಳ್ಳುವ ರೀತಿ ಜನರಿಗೆ ಅನುಮಾನ ಮೂಡಿಸಿದೆ. ಬಾಯಿ ಬಿಟ್ಟರೆ ಬಿಜೆಪಿ ಸುಳ್ಳು ಹೇಳುತ್ತದೆ ಎಂದು ಆರೋಪಿಸಿದರು.

ಇನ್ನು ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. 3,570 ಕಿ.ಮೀ. 150 ದಿನ ಸಂಚರಿಸಲಿದ್ದಾರೆ. 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದ್ದಾರೆ. ಇದು ಐತಿಹಾಸಿಕವಾದ ಪಾದಯಾತ್ರೆಯಾಗಿದೆ ಎಂದರು. ೠ

ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ನಡೆಯುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಧರ್ಮದ, ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ. ಇದರಿಂದ ಜನರ ನಡುವೆ ಅಪನಂಬಿಕೆ, ವಿಶ್ವಾಸದ ಕೊರತೆಯಾಗುತ್ತಿದೆ. ಸಮಾಜದಲ್ಲಿ ಇಂತಹ ವಾತಾವರಣ ನಿರ್ಮಾಣವಾಗಿದೆ. ಒಡೆದ ಮನಸ್ಸುಗಳನ್ನು ಜೋಡಿಸಲು ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು. ರಾಜ್ಯದಲ್ಲಿ 510 ಕಿ.ಮೀ. 21 ದಿನ ಪಾದಯಾತ್ರೆ ನಡೆಯುತ್ತಿದೆ. ಈಗಾಗಲೇ 9 ದಿನ ಸಂಚರಿಸಿದ್ದಾರೆ. ಗುಂಡ್ಲುಪೇಟೆ ಯಿಂದ ರಾಯಚೂರು ವರೆಗೆ ಪಾದಯಾತ್ರೆ ಆರಂಭವಾಗಿದ್ದು, ಬಳ್ಳಾರಿಗೆ ಅ.15 ರಂದು 1 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇಷ್ಟು ಪ್ರಮಾಣದ ಮೌಲ್ಯ ಕುಸಿತ ಯಾವಾಗಲೂ ಆಗಿರಲಿಲ್ಲ.

ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಇದರಿಂದ ಯುವಜನತೆ ಬದುಕು ಕಟ್ಟಿಕೊಳ್ಳಲು ಅಸಾಧ್ಯವಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ತಿಳಿಸಿದ್ದರು. ಆದರೆ, ರೈತರು ಬಳಸುವ ರಸಗೊಬ್ಬರ, ಬೀಜದ ಬೆಲೆ ದುಪ್ಪಟ್ಟು ಆಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು : ಕೆ ಸಿ‌ ಪುಟ್ಟಸಿದ್ಧಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.